ದರ್ಶನ್ ಆದ್ರೂ ಆಗಲಿ, ಯಾರಾದ್ರೂ ಆಗಲಿ, ನನಗೆ ನ್ಯಾಯ ಬೇಕು: ರೇಣುಕಾ ಸ್ವಾಮಿ ಪತ್ನಿ ಕಣ್ಣೀರು

ದರ್ಶನ್ ಆದ್ರೂ ಆಗಲಿ, ಯಾರಾದ್ರೂ ಆಗಲಿ, ನನಗೆ ನ್ಯಾಯ ಬೇಕು: ರೇಣುಕಾ ಸ್ವಾಮಿ ಪತ್ನಿ ಕಣ್ಣೀರು

ಮದನ್​ ಕುಮಾರ್​
|

Updated on: Jun 11, 2024 | 10:05 PM

‘ನಾನು ಪ್ರೆಗ್ನೆಂಟ್​. ಮುಂದೆ ಜೀವನ ಮಾಡೋದು ಹೇಗೆ? ದರ್ಶನ್​ ಸ್ಟಾರ್​ ಆಗಿರಬಹುದು. ನನ್ನ ಬಳಿ ಜನರು ಇದ್ದಾರೆ. ನನಗೆ ನ್ಯಾಯ ಕೊಡಿಸಿ’ ಎಂದು ರೇಣುಕಾ ಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ. ಮೂರು ತಿಂಗಳ ಗರ್ಭಿಣಿ ಆಗಿರುವ ಸಹನಾ ಈಗ ಪತಿಯ ನಿಧನದಿಂದ ಆಘಾತಕ್ಕೆ ಒಳಗಾಗಿದ್ದಾರೆ. ಗಂಡನ ಸಾವಿಗೆ ನ್ಯಾಯ ಬೇಕು ಎಂದು ಅವರು ಕೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ಬೆಂಗಳೂರಿನಲ್ಲಿ ಹತ್ಯೆಗೆ ಒಳಗಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ರೇಣುಕಾ ಸ್ವಾಮಿ ಪತ್ನಿ ಸಹನಾ (Renuka Swamy wife Sahana) ಈಗ ಮೂರು ತಿಂಗಳ ಗರ್ಭಿಣಿ. ಗಂಡನ ಹತ್ಯೆಯ ಸುದ್ದಿ ತಿಳಿದು ಸಹನಾ ಕುಸಿದು ಹೋಗಿದ್ದಾರೆ. ತೀವ್ರ ನೋವಿನ ನಡುವೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಮನೆಯವರಿಗೆ ಈ ರೀತಿ ಆಗಿದ್ದಕ್ಕೆ ನ್ಯಾಯ ಕೊಡಿಸಿ. ನಾನು ಮದುವೆ ಆಗಿ ಒಂದು ವರ್ಷ ಆಗಿದೆ. ಈಗ ನಾನು ಪ್ರೆಗ್ನೆಂಟ್​. ನನ್ನ ಗಂಡನಿಗೆ ಈ ರೀತಿ ಆಗಬಾರದಿತ್ತು. ಅಂದು ಮಧ್ಯಾಹ್ನ ಅವರು ಫೋನ್​ ಮಾಡಿದ್ದರು. ಬೆಂಗಳೂರಿಗೆ ಹೋಗುವ ಬಗ್ಗೆ ಏನೂ ಹೇಳಿರಲಿಲ್ಲ. ಅವರು ದರ್ಶನ್​ ಅಭಿಮಾನಿ ಆಗಿರಲಿಲ್ಲ. ದರ್ಶನ್​ (Darshan) ಆದರೂ ಆಗಲಿ, ಯಾರಾದರೂ ಆಗಲಿ ನನಗೆ ನ್ಯಾಯ ಬೇಕು. ಅವರು ಸ್ಟಾರ್​ ಆಗಿರಬಹುದು. ನನ್ನ ಬಳಿ ಜನರು ಇದ್ದಾರೆ. ನಾನು ಪ್ರೆಗ್ನೆಂಟ್​. ಮುಂದೆ ಜೀವನ ಹೇಗೆ ಮಾಡೋದು? ಗಂಡನ ಜೀವಕ್ಕೆ ಹಾನಿ ಮಾಡಬಾರದಿತ್ತು. ವಾರ್ನಿಂಗ್​ ಮಾಡಿ ಬಿಟ್ಟಿದ್ದರೆ ಸಾಕಿತ್ತು’ ಎಂದು ಸಹನಾ ಹೇಳಿದ್ದಾರೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಾ ಸ್ವಾಮಿಯ ಹತ್ಯೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯತ್ತಿದೆ. ದರ್ಶನ್​, ಪವಿತ್ರಾ ಗೌಡ (Pavithra Gowda) ಸೇರಿದಂತೆ 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.