ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ದರ್ಶನ್ ಕೇಸ್ಗೆ ಎರಡನೇ ಸ್ಥಾನ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಈ ಪ್ರಕಣ ಸಾಕಷ್ಟು ಸೆನ್ಸೇಷನ್ ಕೂಡ ಸೃಷ್ಟಿ ಮಾಡಿತ್ತು. ಈಗ ಈ ಪ್ರಕರಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಾ ಇವೆ. ಹೀಗಿರುವಾಗಲೇ ಈ ಪ್ರಕರಣ ದೇಶದಲ್ಲಿ ಸೆನ್ಸೇಷನ್ ಸೃಷ್ಟಿಸಿದ ಎರಡನೇ ಪ್ರಕರಣವಾಗಿ ಹೊರ ಹೊಮ್ಮಿದೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಘಟನೆ ನಡೆದು ವರ್ಷಗಳೇ ಕಳೆದರೂ ಇದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಈಗ ಈ ಪ್ರಕರಣವು ದೇಶದ ಎರಡನೇ ಪ್ರಮುಖ ಕೇಸ್ ಎಂದು ಅನಿಸಿಕೊಂಡಿದೆ. ಒಂದು ವರ್ಷದಲ್ಲಿ ಮೇಜರ್ ಕೇಸ್ ಅನಿಸಿಕೊಂಡ ಪ್ರಕರಣಗಳ ಪಟ್ಟಿ ರಿವೀಲ್ ಆಗಿದೆ. ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಕೇಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ದೇಶದ ಪ್ರಮುಖ ಕೇಸ್ಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ 2ನೇ ಸ್ಥಾನ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರ ಸೆಷನ್ ಕೋರ್ಟ್, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಸುದ್ದಿ ಆಗಿತ್ತು. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕಾರಣದಿಂದಲೇ ದರ್ಶನ್ ಪ್ರಕರಣಕ್ಕೆ ತೂಕ ಬಂದಿದೆ. ಉಳಿದಂತೆ ಪುಣೆ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಝುಬೇನ್ ಗರ್ಗ್ ಸಾವು ಪ್ರಮುಖ ಪ್ರಕರಣಗಳಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

