Republic Day Parade 2023: ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಪ್ರದರ್ಶನ
Republic Day 2023: ನವದೆಹಲಿಯ ರಾಷ್ಟ್ರಪತಿ ಭವನದ ಕರ್ತವ್ಯಪಥ್ದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದಿಂದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.
ನವದೆಹಲಿಯ ರಾಷ್ಟ್ರಪತಿ ಭವನದ ಕರ್ತವ್ಯಪಥ್ದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ (Republic Day Parade) ಕರ್ನಾಟಕದಿಂದ ‘ನಾರಿ ಶಕ್ತಿ’ ಸ್ತಬ್ಧಚಿತ್ರ (Nari shakti Tableau) ಪ್ರದರ್ಶನವಾಗಿದೆ. ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯವಾಗಿದೆ. ಸ್ತಬ್ಧಚಿತ್ರದಲ್ಲಿ ಈ ಬಾರಿ ಆದರ್ಶ ಮಹಿಳೆಯರ ಸಾಧನೆ ಅನಾವರಣವಾಗಿದೆ. ಮೂವರು ಮಹಿಳೆಯರಿಗೆ ಸ್ತಬ್ಧಚಿತ್ರ ಸಮರ್ಪಣೆ ಮಾಡಲಾಗಿದೆ. ಸ್ತಬ್ಧಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ, ಸಾಲುಮರದ ತಿಮ್ಮಕ್ಕ ಅವರ ಸಾಧನೆಗಳ ಪ್ರದರ್ಶನ ಮಾಡಲಾಗಿದೆ. ಹಾಗೇ ಗಿಡ-ಮರ, ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿದೆ. ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರ, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತೆ ಚಿತ್ರ ಪ್ರದರ್ಶನಗೊಂಡಿದೆ.
Published on: Jan 26, 2023 12:58 PM