ಕೈಕೊಟ್ಟ ಆಸ್ಪತ್ರೆ ಲಿಫ್ಟ್​​: ಗೋಡೆ ಕೊರೆದು 9 ಜನರನ್ನ ರಕ್ಷಿಸಿದ ರೋಚಕ ವಿಡಿಯೋ

Edited By:

Updated on: May 13, 2025 | 6:58 PM

ಕಲಬುರಗಿಯ ಜಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ಯಡವಟ್ಟಿನಿಂದ ಕರ್ನಾಟಕದಾದ್ಯಂತ ಸುದ್ದಿಯಾಗುತ್ತಲೇ ಇದೆ. ಮೊಬೈಲ್​ ಟಾರ್ಚ್​​ನಿಂದಲೇ ರೋಗಿಗೆ ಚಿಕಿತ್ಸೆ ನೀಡಿರುವ ವಿಡಿಯೋ ಫುಲ್ ವೈರಲ್ ಆಗಿತ್ತು. ಇದೀಗ ಮತ್ತೆ ಆಸ್ಪತ್ರೆಯಲ್ಲಿ ಯಡವಟ್ಟು ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ. ಆಗ ಕೂಡಲೇ ಗೋಡೆಯನ್ನು ಕೊರೆದು 9 ಜನರನ್ನು ರಕ್ಷಣೆ ಮಾಡಲಾಗಿದೆ.

ಕಲಬುರಗಿ, (ಮೇ 13): ಇಲ್ಲಿನ ಜಿಮ್ಸ್ ಆಸ್ಪತ್ರೆ (Gims Hospital) ಒಂದಲ್ಲ ಒಂದು ಯಡವಟ್ಟಿನಿಂದ ಕರ್ನಾಟಕದಾದ್ಯಂತ ಸುದ್ದಿಯಾಗುತ್ತಲೇ ಇದೆ. ಮೊಬೈಲ್​ ಟಾರ್ಚ್​​ನಿಂದಲೇ ರೋಗಿಗೆ ಚಿಕಿತ್ಸೆ ನೀಡಿರುವ ವಿಡಿಯೋ ಫುಲ್ ವೈರಲ್ ಆಗಿತ್ತು. ಇದೀಗ ಮತ್ತೆ ಆಸ್ಪತ್ರೆಯಲ್ಲಿ ಯಡವಟ್ಟು ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ. ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ ಒಂಭತ್ತು ಜನ ಸಿಬ್ಬಂದಿ ಉಸಿರಾಡಲು ಪರದಾಡುವಂತಾಯಿತು. ಹೊರಗಡೆ ಬರಲಾಗದೆ ಕಂಗಾಲಾಗಿದ್ದರು. ತಕ್ಷಣವೇ ಲಿಫ್ಟ್​ನಲ್ಲಿದ್ದ ಒರ್ವ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ‌‌. ಆಗ ಕೂಡಲೇ ಗೋಡೆಯನ್ನು ಕೊರೆದು 9 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗೋಡೆ ಕೊರೆದ ರೋಚಕ ವಿಡಿಯೋ ಇಲ್ಲಿದೆ ನೋಡಿ.