ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯನ್ನ ರಕ್ಷಿಸಿದ NDRF ಸಿಬ್ಬಂದಿ, ಎಲ್ಲಿ?
[lazy-load-videos-and-sticky-control id=”bbESSgJZVLI”] ಯಾದಗಿರಿ: ಕೃಷ್ಣಾ ನದಿ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿ, ನದಿಯ ಪ್ರವಾಹದಿಂದ ಅಲ್ಲೇ ಸಿಲುಕಿಕೊಂಡು ಪರದಾಡುವ ಸ್ಥಿತಿ ಜಿಲ್ಲೆಯಲ್ಲಿ ಕಂಡು ಬಂತು. ವಿಷಯ ತಿಳಿದು ಸ್ಥಳಕ್ಕೆ ಬಂದ NDRF ತಂಡ ಬೋಟ್ ಮುಖಾಂತರ ಕುರಿಗಾಹಿ ಮತ್ತು ಆತನ ಕುರಿಗಳನ್ನು ರಕ್ಷಿಸಿದ್ದಾರೆ. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಐಬಿ ತಾಂಡದ ಟೋಪಣ್ಣ ಕೃಷ್ಣ ನದಿ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರಿಂದ […]

[lazy-load-videos-and-sticky-control id=”bbESSgJZVLI”]
ಯಾದಗಿರಿ: ಕೃಷ್ಣಾ ನದಿ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿ, ನದಿಯ ಪ್ರವಾಹದಿಂದ ಅಲ್ಲೇ ಸಿಲುಕಿಕೊಂಡು ಪರದಾಡುವ ಸ್ಥಿತಿ ಜಿಲ್ಲೆಯಲ್ಲಿ ಕಂಡು ಬಂತು. ವಿಷಯ ತಿಳಿದು ಸ್ಥಳಕ್ಕೆ ಬಂದ NDRF ತಂಡ ಬೋಟ್ ಮುಖಾಂತರ ಕುರಿಗಾಹಿ ಮತ್ತು ಆತನ ಕುರಿಗಳನ್ನು ರಕ್ಷಿಸಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಐಬಿ ತಾಂಡದ ಟೋಪಣ್ಣ ಕೃಷ್ಣ ನದಿ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು.
ಸ್ಥಳೀಯರಿಂದ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜಗೌಡ ಈ ವಿಷಯವನ್ನು NDRF ಸಿಬ್ಬಂದಿಗೆ ತಲುಪಿಸಿದರು. ಸ್ಥಳಕೆ ಬಂದ NDRF ತಂಡ ಬೋಟ್ ಮುಖಾಂತರ ಟೋಪಣ್ಣ ಮತ್ತು ಆತನ ಕುರಿಗಳನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದ್ದಾರೆ.
Published On - 1:15 pm, Sun, 9 August 20




