ಕೊರೊನಾದಿಂದ ಮೃತಪಟ್ಟವರ ಉಚಿತ ಶವಸಂಸ್ಕಾರಕ್ಕೆ ಮುಂದಾದ ‘ದೇವದೂತರು’
[lazy-load-videos-and-sticky-control id=”c4SVOtgGBcw”] ಬೆಂಗಳೂರು: ಹಳೇ ಗೆಳೆಯರ ತಂಡವೊಂದು ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಮುಂದಾಗಿದ್ದಾರೆ. ಐಟಿಬಿಟಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಗೆಳೆಯರ ಬಳಗವು ಮರ್ಸಿ ಏಂಜಲ್ಸ್ ಎಂಬ ಹೆಸರಿನ ತಂಡವನ್ನ ಕಟ್ಟಿಕೊಂಡಿ 300ಕ್ಕೂ ಹೆಚ್ಚು ಸೋಂಕಿತರ ಶವಸಂಸ್ಕಾರ ನೆರವೇರಿಸಿದ್ದಾರೆ. ಕೊವಿಡ್ ಭಯದ ಹಿನ್ನೆಲೆಯಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಬಂಧಿಕರು ಬರಲು ಹಿಂದೆಮುಂದೆ ಯೋಚಿಸುವ ಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಈ ಸ್ನೇಹಿತರ ತಂಡವು ಆಸ್ಪತ್ರೆ, ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದು […]

[lazy-load-videos-and-sticky-control id=”c4SVOtgGBcw”]
ಬೆಂಗಳೂರು: ಹಳೇ ಗೆಳೆಯರ ತಂಡವೊಂದು ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಮುಂದಾಗಿದ್ದಾರೆ. ಐಟಿಬಿಟಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಗೆಳೆಯರ ಬಳಗವು ಮರ್ಸಿ ಏಂಜಲ್ಸ್ ಎಂಬ ಹೆಸರಿನ ತಂಡವನ್ನ ಕಟ್ಟಿಕೊಂಡಿ 300ಕ್ಕೂ ಹೆಚ್ಚು ಸೋಂಕಿತರ ಶವಸಂಸ್ಕಾರ ನೆರವೇರಿಸಿದ್ದಾರೆ.
ಕೊವಿಡ್ ಭಯದ ಹಿನ್ನೆಲೆಯಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಬಂಧಿಕರು ಬರಲು ಹಿಂದೆಮುಂದೆ ಯೋಚಿಸುವ ಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಈ ಸ್ನೇಹಿತರ ತಂಡವು ಆಸ್ಪತ್ರೆ, ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ಗೆಳೆಯರು ಕೋವಿಡ್ ಪ್ರೋಟೋಕಾಲ್ ಪ್ರಕಾರ ಎಲ್ಲಾ ಮುನ್ಬಚ್ಚರಿಕಾ ಕ್ರಮ ಹಾಗೂ ತಜ್ಙರ ಮಾರ್ಗದರ್ಶನದಲ್ಲೇ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಇದಲ್ಲದೆ, ಶವ ಸಂಸ್ಕಾರದ ವೆಚ್ಚವನ್ನೂ ಇವರೇ ಭರಿಸುತ್ತಾರೆ.
https://www.facebook.com/Tv9Kannada/posts/1410641212471438
Published On - 11:03 am, Sun, 9 August 20



