ಸೆಂಟ್ರಲ್ ಜೈಲಿಗೆ ಅಳವಡಿಸಿರುವ ಜಾಮರ್ ನಿಂದ ಪರಪ್ಪನ ಅಗ್ರಹಾರದ ನಿವಾಸಿಗಳಿಗೆ ಅನೇಕ ಸಮಸ್ಯೆ!

|

Updated on: Aug 26, 2024 | 2:26 PM

ಯಾರದ್ದೋ ಶಾಪ ಸನ್ಯಾಸಿಗೆ ಮತ್ತು ಸನ್ಯಾಸಿ ಶಾಪ ಊರಿಗೆ ಅಂತ ಹೇಳುತ್ತಾರಲ್ಲ, ಹಾಗಾಗಿದೆ ಪರಪ್ಪನ ಅಗ್ರಹಾರ ನಿವಾಸಿಗಳ ಪಾಡು. ಯಾವುದೇ ದಾಕ್ಷಿಣ್ಯ ತೋರದೆ ಕೈದಿಗಳಿಂದ ಮೊಬೈಲ್ ಪೋನ್ ಗಳನ್ನು ಜೈಧಿಕಾರಿಗಳು ಸೀಜ್ ಮಾಡಿದರೆ ಜಾಮರ್ ಅಳವಡಿಸುವ ಪ್ರಶ್ನೆಯೇ ಉದ್ಭವಿಸಲ್ಲ.

ಆನೇಕಲ್ (ಬೆಂಗಳೂರು): ಇದ್ಯಾವ ಸೀಮೆ ನ್ಯಾಯ ಸ್ವಾಮಿ ಅಂತ ಸೆಂಟ್ರಲ್ ಜೈಲಿನ ಸುತ್ತಮುತ್ತ ವಾಸವಾಗಿರುವ ಪರಪ್ಪನ ಅಗ್ರಹಾರದ ನಿವಾಸಿ ಲಕ್ಷ್ಮಣ್ ಸರ್ಕಾರ ಮತ್ತು ಜೈಲು ಅಧಿಕಾರಿಗಳನ್ನಿ ಪ್ರಶ್ನಿಸುತ್ತಿದ್ದಾರೆ. ಖೈದಿಗಳು ಜೈಲಲ್ಲಿ ಕದ್ದು ಮುಚ್ಚಿ ಮೊಬೈಲ್ ಫೋನ್ ಬಳಸಿದರೂ ನೆಟ್ವರ್ಕ್ ಸಿಗಬಾರದದೆಂದು ಜಾಮರ್ ಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳ ಅಳವಡಿಕೆಯಿಂದಾಗಿ ಅಗ್ರಹಾರದ ನಿವಾಸಿಗಳಿಗೆ ಫೋನ್ ಬಳಸುವುದು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಅವರಿಎಗ ಫೋನಬ್ ಮಾಡುವುದು ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ಸಬಲರಲ್ಲದೆ ಜನ ತಮ್ಮ ಮನೆಯಲ್ಲಿ ವೈಫೈ ಹಾಕಿಸುಕೊಳ್ಳುವುದು ಸಾಧ್ಯವಿಲ್ಲ. ಜಾಮರ್ ಗಳಿಂದ ತಮಗೆ ಅನೇಕ ಸಮಸ್ಯೆಗಳೂ ಎದುರಾಗುತ್ತಿದ್ರೂ ಜೈಲಲ್ಲಿರುವ ಕೆಲ ಖೈದಿಗಳು ರಾಜಾರೋಷವಾಗಿ ಫೋನ್ ಬಳಸುತ್ತಿದ್ದಾರೆ. ಹದಗೆಟ್ಟಿರುವ ಜೈಲಿನ ವ್ಯವಸ್ಥೆಯನ್ನು ಸರಿಪಡಿಸಬೇಕು, ಅಲ್ಲಿ ನಡೆಯುವ ಅವ್ಯವಹಾರಗಳಲ್ಲಿ ಉನ್ನತಾಧಿಕಾರಿಗಳು ಶಾಮೀಲಾಗಿದ್ದಾರೆ, ಕೆಳ ಮಟ್ಟದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಪರಿಹಾರ ಕಾಣದೆಂದು ಲಕ್ಷ್ಮಣ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ಗೆ ಸಿಗರೇಟ್ ಮಾತ್ರವಲ್ಲ, ಸಿಗ್ತಿದೆ ಶಿವಾಜಿ ಮಿಲ್ಟ್ರಿ ಹೋಟೆಲ್ ಬಿರಿಯಾನಿ, ಕಿಕ್ಕೇರಿಸೋ ಎಣ್ಣೆ

Follow us on