AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ಸಿಗರೇಟ್ ಮಾತ್ರವಲ್ಲ, ಸಿಗ್ತಿದೆ ಶಿವಾಜಿ ಮಿಲ್ಟ್ರಿ ಹೋಟೆಲ್ ಬಿರಿಯಾನಿ, ಕಿಕ್ಕೇರಿಸೋ ಎಣ್ಣೆ

ದರ್ಶನ್ ಒಂದು ಕಡೆ ಜೈಲಿನ ಊಟ ಸರಿಹೊಂದುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ವಾಂತಿ ಆಗ್ತಿದೆ, ತೂಕ ಕಡಿಮೆ ಆಗಿದೆ ಎಂದು ಹೇಳುತ್ತಿದ್ದರು. ಮನೆ ಊಟ ಕೊಡಿ ಸ್ವಾಮಿ ಅಂತ ನ್ಯಾಯಾಲಯಕ್ಕೂ ಅರ್ಜಿಸಲ್ಲಿಕೆ ಮಾಡಿದ್ದಾರೆ. ಆದರೆ ಮನೆ ಊಟವನ್ನೂ ಮೀರಿದಂತ ವ್ಯವಸ್ಥೆ ದರ್ಶನ್​ಗೆ ಸಿಗುತ್ತಿದೆ.

ದರ್ಶನ್​ಗೆ ಸಿಗರೇಟ್ ಮಾತ್ರವಲ್ಲ, ಸಿಗ್ತಿದೆ ಶಿವಾಜಿ ಮಿಲ್ಟ್ರಿ ಹೋಟೆಲ್ ಬಿರಿಯಾನಿ, ಕಿಕ್ಕೇರಿಸೋ ಎಣ್ಣೆ
ದರ್ಶನ್
Kiran HV
| Updated By: ರಾಜೇಶ್ ದುಗ್ಗುಮನೆ|

Updated on: Aug 26, 2024 | 9:17 AM

Share

ನಟ ದರ್ಶನ್ ಅವರಿಗೆ ಜೈಲಲ್ಲಿ ಎಲ್ಲಾ ಸೌಲಭ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿಸುವಂತ ಫೋಟೋ ಒಂದು ವೈರಲ್ ಆಗಿದೆ. ದರ್ಶನ್ ಇದರಲ್ಲಿ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ಇದೆ. ಆರೋಪಿ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಎಲ್ಲಾ ಸೌಲಭ್ಯ ಸಿಗುತ್ತಿದೆ ಎನ್ನಲಾಗಿದೆ. ನಾಮಾಕವಸ್ಥೆಗಷ್ಟೇ ಅವರು ಜೈಲಿನಲ್ಲಿ ಇದ್ದಾರೆ. ಸಿಗರೇಟ್ ಮಾತ್ರವಲ್ಲ ಬೇಕಾದ ಎಲ್ಲಾ ವಸ್ತುಗಳು ದರ್ಶನ್​ಗೆ ಸಿಗುತ್ತಿದೆ ಎನ್ನಲಾಗಿದೆ.

ದರ್ಶನ್​ಗೆ ಮನೆ ಊಟ ಮಾತ್ರ ಅಲ್ಲ. ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಪೂರೈಕೆ ಆಗುತ್ತಿದೆ. ಹೌದು, ದರ್ಶನ್ ಮಾಂಸ ಪ್ರಿಯ. ಮಾಂಸಾಹಾರದ ಊಟದ ಮೇಲೆ ಅವರಿಗೆ ಸಖತ್ ಪ್ರೀತಿ. ಹೀಗಾಗಿ, ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್​ನಿಂದಲೇ ದರ್ಶನ್​ಗೆ ಬಿರಿಯಾನಿ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.  ಊಟದ ಜೊತೆ ಬೇಕಾದಾಗ ಕಿಕ್ಕೇರಿಸಿಕೊಳ್ಳಲು ಎಣ್ಣೆಯೂ ಸಿಗುತ್ತಿದೆಯಂತೆ.

ದರ್ಶನ್ ಅವರು ಒಬ್ಬನೆ ಕೂತು ಎಣ್ಣೆ ಕುಡಿಯುತ್ತಿಲ್ಲ. ಜೈಲಿನಲ್ಲಿರೋ ನಟೋರಿಯಸ್​ ಖೈದಿಗಳ ಜೊತೆಯೇ ದರ್ಶನ್ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ. ಈ ಪಾರ್ಟಿಯಲ್ಲಿ ರೌಡಿಶೀಟರ್​ಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು, ಆಪ್ತ ನಾಗರಾಜ್, ಪವನ್ ಭಾಗಿ ಆಗುತ್ತಿದ್ದಾರೆ.

ಪೂರೈಕೆ ಯಾರಿಂದ?

ದರ್ಶನ್​ಗೆ ಇಷ್ಟೆಲ್ಲ ವ್ಯವಸ್ಥೆ ಮಾಡ್ತಿರೋದು ರೌಡಿ ಶೀಟರ್ ಒಬ್ಬ ಎನ್ನಲಾಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ದರ್ಶನ್​ಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗುತ್ತಿದೆ. ದರ್ಶನ್​ಗೆ ಬಿರಿಯಾನಿ, ಎಣ್ಣೆ, ಸಿಗರೇಟ್, ಮಸಾಜ್ ವ್ಯವಸ್ಥೆಯನ್ನೂ ಮಾಡಿಸುತ್ತಿದ್ದಾರೆ. ಸದ್ಯ ಸಿದ್ದಾಪುರ ಮಹೇಶ್ ಕೊಲೆ ಕೇಸ್​ನಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ.

ನಡೆದಿತ್ತು ದಾಳಿ

ಜೈಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಸಿಕ್ಕಿ ಶನಿವಾರ ಸಿಸಿಬಿ ರೇಡ್ ನಡೆಸಿತ್ತು. ಬ್ಯಾರಕ್​ಗಳಲ್ಲಿ ಮೊಬೈಲ್ಸ್, ವೆಪನ್ಸ್ ಇದೆ ಅಂತ ಮಾಹಿತಿ ತಿಳಿದು ದಾಳಿ ಮಾಡಲಾಗಿತ್ತು. ಸಿಸಿಬಿ ಅಧಿಕಾರಿಗಳ ದಾಳಿಗೂ ಮುನ್ನವೇ ರೇಡ್ ಸುದ್ದಿ ಲೀಕ್ ಆಗಿತ್ತು. ಸಿಸಿಬಿ ರೇಡ್ ಬಗ್ಗೆ ಅಲರ್ಟ್ ಆದ ಖೈದಿಗಳಿಂದ ನಿಷೇಧಿತ ವಸ್ತುಗಳು ಶಿಫ್ಟ್ ಮಾಡಲಾಗಿತ್ತು. ಬ್ಯಾರಕ್​ಗಳಿಂದ 4-5 ಬಾಕ್ಸ್​ಗಳನ್ನು ಇತರೆ ಖೈದಿಗಳು ಶಿಪ್ಟ್ ಮಾಡಿದ್ದಾರೆ. ಇದರಲ್ಲಿ ಮೊಬೈಲ್ಸ್, ಡ್ರಿಂಕ್ಸ್ ಇತ್ತು ಎನ್ನಲಾಗಿದೆ.