ಜೈಲಲ್ಲಿರುವ ದರ್ಶನ್ ಗೆ ಶಿವಕುಮಾರ್ ಸಹಾಯ ಮಾಡುವುದಾಗಿ ಹೇಳಿದ್ದರು, ಇದು ಸಹಾಯದ ಸ್ಯಾಂಪಲ್? ಅರ್ ಅಶೋಕ

ಜೈಲಲ್ಲಿರುವ ದರ್ಶನ್ ಗೆ ಶಿವಕುಮಾರ್ ಸಹಾಯ ಮಾಡುವುದಾಗಿ ಹೇಳಿದ್ದರು, ಇದು ಸಹಾಯದ ಸ್ಯಾಂಪಲ್? ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2024 | 1:09 PM

ಜೈಲರ್ ಗಳನ್ನು, ರೌಡಿಗಳಿಗೆ ನೆರವಾಗುತ್ತಿದ್ದ ಜೈಲು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ ಮತ್ತು ದರ್ಶನ್ ರನ್ನು ಬೇರೊಂದು ಜೈಲಿಗೆ ವರ್ಗಾಯಿಸುವ ಯೋಚನೆ ಇದೆ ಎಂದು ಗೃಹ ಸಚಿವ ಹೇಳಿದ್ದಾರೆ. ಅದರೆ ಗಮನಿಸಬೇಕಾದ ಸಂಗತಿಯೆಂದರೆ, ಎಲ್ಲ ಕಾರಾಗೃಹಗಳಲ್ಲೂ ಕಪ್ಪುತೋಳಗಳಿರುತ್ತವೆ, ಯಾರನ್ನೆಲ್ಲ ಸರ್ಕಾರ ಸಸ್ಪೆಂಡ್ ಮಾಡುತ್ತದೆ?

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ, ಕೊಲೆ ಸುಲಿಗೆ ಮತ್ತು ದರೋಡೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ, ಜೈಲಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಸರ್ಕಾರ ಉತ್ತರಿಸಬೇಕು ಎಂದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಚಿತ್ರನಟ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿರುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಣೆ, ಯಾಕೆಂದರೆ ಚಿತ್ರನಟನನ್ನು ಅವರು ಜೈಲಲ್ಲಿ ಭೇಟಿಯಾಗಿದ್ದರು ಮತ್ತು ಸಹಾಯ ಮಾಡುವ ಭರವಸೆ ನೀಡಿದ್ದರು ಎಂದರು. ಕೇವಲ ನಾಲ್ಕು ದಿನಗಳ ಹಿಂದೆ, ಜೈಲಲ್ಲಿ ರೇಡ್ ನಡೆದಿತ್ತು ಮತ್ತು ಕೈದಿಗಳ ಬಳಿಯಿದ್ದ ಮೊಬೈಲ್ ಫೋನ್ ಮತ್ತು ಇತರ ನಿಷೇಧಿತ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿತ್ತು, ಅದರೆ 4 ದಿನಗಳ ಬಳಿಕ ದರ್ಶನ್ ಕಾಫಿ ಹೀರುತ್ತ ಸಿಗರೇಟು ಸೇದುತ್ತ ರೌಡಿಗಳ ಜೊತೆ ಕುಳಿತಿರುವ ಫೋಟೋ ತೆಗೆಯಲು ಮೊಬೈಲ್ ಎಲ್ಲಿಂದ ಬಂತು ಎಂದು ಅಶೋಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ ಫೋಟೋ ವೈರಲ್ ಬೆನ್ನಲ್ಲೇ ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳು ಸಸ್ಪೆಂಡ್