ಬೆಂಗಳೂರು ಮುಖ್ಯರಸ್ತೆಯ ಮೇಲೆ ಸೃಷ್ಟಿಯಾಗಿರುವ ಹೊಂಡದಲ್ಲಿ ಸಿಲುಕಿದ್ದ ಬಿ ಎಮ್ ಟಿ ಸಿ ಬಸ್ಸನ್ನು ಸ್ಥಳೀಯರು ಹಗ್ಗಕಟ್ಟಿ ಎಳೆದರು!
ಬಸ್ಸನ್ನು ಹಗ್ಗ ಕಟ್ಟಿ ಎಳೆಯುತ್ತಿರುವುದು ಒಂದೆರಡು ನಾಯಿಗಳಲ್ಲಿ ಅಚ್ಚರಿ ಮೂಡಿಸಿದೆ. ನಗರದಾದ್ಯಂತ ಬರೀ ಇದೇ ಗೋಳು ಮಾರಾಯ್ರೇ.
ಬೆಂಗಳೂರು: ಇದು ರಥೋತ್ಸವದ ವಿಡಿಯೋ ಅಲ್ಲ ಮಾರಾಯ್ರೇ. ಕಳೆದ ರಾತ್ರಿ ಸುರಿದ ರಣಮಳೆಯಿಂದಾಗಿ ನಮ್ಮ ಬೆಂಗಳೂರು ನಗರ ಒಂದು ದ್ವೀಪದಂತೆ (island) ಗೋಚರಿಸುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸೊಂದು ವ್ಹೈಟ್ ಫೀಲ್ಡ್ ಏರಿಯಾದ (Whitefield) ಮುಖ್ಯರಸ್ತೆಯಲ್ಲೇ ಸಿಲುಕಿಕೊಂಡಾಗ ಸ್ಥಳೀಯರು ಹಗ್ಗ ಕಟ್ಟಿ ಎಳೆದ ದೃಶ್ಯವಿದು. ಬಸ್ಸನ್ನು ಹಗ್ಗ ಕಟ್ಟಿ ಎಳೆಯುತ್ತಿರುವುದು ಒಂದೆರಡು ನಾಯಿಗಳಲ್ಲಿ ಅಚ್ಚರಿ ಮೂಡಿಸಿದೆ. ನಗರದಾದ್ಯಂತ ಬರೀ ಇದೇ ಗೋಳು ಮಾರಾಯ್ರೇ.