ಮನೆ ಮೇಲೆ ಬಿದ್ದ ಬೃಹತ್ ಮರದ ಕೊಂಬೆ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆಯ ಮೇಲೆ ಬೃಹತ್ ಮರದ ಕೊಂಬೆ ಬಿದ್ದಿದ್ದು, ಆಚೆ ಬರಲಾಗದೇ ಮೂವರು ಮನೆಯೊಳಗೆ ಸಿಲುಕಿಕೊಂಡಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರ ಬಳಿಯ ಫ್ರೆಜರ್ಟೌನ್ನಲ್ಲಿ ನಡೆದಿದೆ. ಬೃಹತ್ ಮರದ ಕೊಂಬೆಯೊಂದು ಇಂದು (ಮೇ 19) ಬೆಳಗ್ಗೆ ಮನೆ ಮೇಲೆ ಬಿದ್ದಿದ್ದು, ಕೊಂಬೆ ಪೂರ್ತಿ ಮನೆಯನ್ನು ಆವರಿಸಿಕೊಂಡಿದೆ. ಇದರಿಂದ ಮನೆಯಿಂದ ಹೊರಗೆ ಬರಲು ಆಗದೆ ನಿವಾಸಿಗಳು ಹೆಣಗಾಡಿದ್ದಾರೆ. ಇದನ್ನು ಸ್ಥಳೀಯರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗಮನಕ್ಕೂ ತಂದರೂ ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. GBA ಅರಣ್ಯ ವಿಭಾಗದ ಸಿಬ್ಬಂದಿ ಮರದ ಕೊಂಬೆ ತೆರವು ಮಾಡದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಮೇ 19): ಮನೆಯ ಮೇಲೆ ಬೃಹತ್ ಮರದ ಕೊಂಬೆ ಬಿದ್ದಿದ್ದು, ಆಚೆ ಬರಲಾಗದೇ ಮೂವರು ಮನೆಯೊಳಗೆ ಸಿಲುಕಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಪುಲಕೇಶಿ ನಗರ ಬಳಿಯ ಫ್ರೆಜರ್ಟೌನ್ನಲ್ಲಿ ನಡೆದಿದೆ. ಬೃಹತ್ ಮರದ ಕೊಂಬೆಯೊಂದು ಇಂದು (ಮೇ 19) ಬೆಳಗ್ಗೆ ಮನೆ ಮೇಲೆ ಬಿದ್ದಿದ್ದು, ಕೊಂಬೆ ಪೂರ್ತಿ ಮನೆಯನ್ನು ಆವರಿಸಿಕೊಂಡಿದೆ. ಇದರಿಂದ ಮನೆಯಿಂದ ಹೊರಗೆ ಬರಲು ಆಗದೆ ನಿವಾಸಿಗಳು ಹೆಣಗಾಡಿದ್ದಾರೆ. ಇದನ್ನು ಸ್ಥಳೀಯರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗಮನಕ್ಕೂ ತಂದರೂ ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. GBA ಅರಣ್ಯ ವಿಭಾಗದ ಸಿಬ್ಬಂದಿ ಮರದ ಕೊಂಬೆ ತೆರವು ಮಾಡದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆಯೇ ನಾಲ್ಕು ಗಂಟೆ ಬಳಿಕ ಸ್ಥಳಕ್ಕೆ ಜಿಬಿಎ ಅರಣ್ಯ ಸಿಬ್ಬಂದಿ ಆಗಮಿಸಿ ಮರವನ್ನು ತೆರವುಗೊಳಿಸಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
