ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣ ಮತ್ತು ನನ್ನ ಕುಟುಂಬಗಳು ಬೇರೆ ಬೇರೆಯಾಗಿವೆ: ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2022 | 8:00 PM

ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣನವರ ಕುಟುಂಬ ಮತ್ತು ತಮ್ಮ ಕುಟುಂಬದ ನಡುವೆ ಯಾವುದೇ ಸಂಬಂಧವಿಲ್ಲ. ಹದಿನೈದು ವರ್ಷಗಳಿಂದ ತಮ್ಮ ಕುಟುಂಬಗಳು ಬೇರೆ ಬೇರೆಯಾಗಿವೆ. ಅವರ ಕುಟುಂಬದಲ್ಲಿ ನಡೆಸುವ ವ್ಯವಹಾರ ತಮಗೆ ಗೊತ್ತಿರುವುದಿಲ್ಲ ಮತ್ತು ತಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಸಮಸ್ಯೆ ಎದುರಾಗಿದೆ. 2019 ರಲ್ಲಿ ಅವರು ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಹಾಸನದಿಂದ (Hassan) ಜೆಡಿ(ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರಜ್ವಲ್ ಬಹಳಷ್ಟು ತಪ್ಪು ಮಾಹಿತಿ ನೀಡಿದ್ದಾರೆ, ಅಸ್ತಿಯ ಬಗ್ಗೆ ಸರಿಯಾದ ವಿವರಗಳನ್ನು ನೀಡಿಲ್ಲ ಎಂದು ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಎ ಮಂಜು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಅದೇಶ ನೀಡಿದೆ. ವಿಷಯದ ಬಗ್ಗೆ ಹೆಚ್ಚಿನ ವಿವರಗಳಿಗೆ ಮಾಧ್ಯಮದವರು ಪ್ರಜ್ವಲ್ ಅವರ ಚಿಕ್ಕಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಸಂಪರ್ಕಿಸಿದಾಗ ಅವರಿಗೆ ನಿರಾಶೆ ಕಾದಿತ್ತು. ಸದರಿ ವಿಷಯ ಮತ್ತು ತಮ್ಮ ನಡುವೆ ಯಾವುದೇ ಸಂಬಂಧವಿಲ್ಲವೆಂಬಂತೆ ಕುಮಾರಸ್ವಾಮಿ ಮಾತಾಡಿದರು.

ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣನವರ ಕುಟುಂಬ ಮತ್ತು ತಮ್ಮ ಕುಟುಂಬದ ನಡುವೆ ಯಾವುದೇ ಸಂಬಂಧವಿಲ್ಲ. ಹದಿನೈದು ವರ್ಷಗಳಿಂದ ತಮ್ಮ ಕುಟುಂಬಗಳು ಬೇರೆ ಬೇರೆಯಾಗಿವೆ. ಅವರ ಕುಟುಂಬದಲ್ಲಿ ನಡೆಸುವ ವ್ಯವಹಾರ ತಮಗೆ ಗೊತ್ತಿರುವುದಿಲ್ಲ ಮತ್ತು ತಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸುಪ್ರೀಮ್ ಕೋರ್ಟು ಯಾವ ತನಿಖೆಗೆ ಆದೇಶ ನೀಡಿದೆಯೆನ್ನುವ ಮಾಹಿತಿ ತಮ್ಮಲ್ಲಿ ಇಲ್ಲ, ಮಾಧ್ಯಮದವರಿಂದಲೇ ಅದು ಗೊತ್ತಾಗಿರೋದು. ವಿವರಗಳನ್ನು ಪಡೆದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ:  Viral Video: ‘ಕೆ ಹೆಂಡಿ ಹುಂಡಿ ಸಿ’ ಹಾಡಿಗೆ ನೃತ್ಯ ಮಾಡಿದ ಗಗನಸಖಿ; ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?​