ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡಲು ಎಸ್ಐಟಿ ಅಧಿಕಾರಿಗಳು ರೇವಣ್ಣ ಮೇಲೆ ಒತ್ತಡ ಹೇರುತ್ತಿದ್ದಾರೆ: ಕುಮಾರಸ್ವಾಮಿ
ತನಿಖೆಗೆ ರೇವಣ್ಣ ಸಹಕರಿಸುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಿಗೆ ಲೀಕ್ ಆಗಿರುವ ಸಂಗತಿಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಒಬ್ಬ ಜವಾಬ್ದಾರಿಯುತ ರಾಜಕೀಯ ಮುಖಂಡನಿಂದ ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡುವಂತೆ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
ಬೆಂಗಳೂರು: ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಈಗ ಎಸ್ಐಟಿ ವಶದಲ್ಲಿರುವ ತಮ್ಮ ಸಹೋದರ ಹೆಚ್ ಡಿ ರೇವಣ್ಣ (HD Revanna) ಪರ ಬ್ಯಾಟ್ ಮಾಡಿದರು. ರೇವಣ್ಣ ವಿರುದ್ಧ ನೇರವಾಗಿ ಇದುವರೆಗೆ ಒಂದೇ ಒಂದು ದೂರು ಕೂಡ ದಾಖಲಾಗಿಲ್ಲ ಹಾಗಾಗೇ ಮಹಿಳೆ ಅಪಹರಣದ (woman abduction) ಕತೆಯನ್ನು ಸೃಷ್ಟಿಸಲಾಗಿದೆ. ಅಪಹೃತೆ ಎಲ್ಲಿದ್ದಾಳೆ ಅಕೆಯನ್ನು ಎಲ್ಲಿಂದ ಕರೆದುಕೊಂಡು ಬಂದರು, ಕರೆತರುವ ಮುನ್ನ ಸ್ಥಳದ ಮಹಜರ್ ನಡೆಸಲಾಯಿತೇ ಅನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾಳೇನಹಳ್ಳಿ ತೋಟದ ಮನೆಯಿಂದ ರಕ್ಷಿಸಿದ್ದು ಅಂತ ಹೇಳುತ್ತಿದ್ದಾರೆ, ಅಲ್ಲಿ ಮಹಜರ್ ಮಾಡದ ಎಸ್ಐಟಿ ಅಧಿಕಾರಿಗಳು 36 ಗಂಟೆಗಳ ಕಾಲ ಮಹಿಳೆಯನ್ನು ತಮ್ಮ ಕಚೇರಿ ಕೂಡಿ ಹಾಕುತ್ತಾರೆ, ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕೆಂಬ ವಿಚಾರ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ತನಿಖೆಗೆ ರೇವಣ್ಣ ಸಹಕರಿಸುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಿಗೆ ಲೀಕ್ ಆಗಿರುವ ಸಂಗತಿಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಒಬ್ಬ ಜವಾಬ್ದಾರಿಯುತ ರಾಜಕೀಯ ಮುಖಂಡನಿಂದ ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡುವಂತೆ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ