IND vs NED: ರೋಹಿತ್ ಶರ್ಮಾಗೆ ವಿಕೆಟ್ ಸಿಕ್ಕಾಗ ಡಗೌಟ್​ನಲ್ಲಿ ರಿತಿಕಾ ಕೊಟ್ಟ ರಿಯಾಕ್ಷನ್ ನೋಡಿ: ವಿಡಿಯೋ

IND vs NED: ರೋಹಿತ್ ಶರ್ಮಾಗೆ ವಿಕೆಟ್ ಸಿಕ್ಕಾಗ ಡಗೌಟ್​ನಲ್ಲಿ ರಿತಿಕಾ ಕೊಟ್ಟ ರಿಯಾಕ್ಷನ್ ನೋಡಿ: ವಿಡಿಯೋ

Vinay Bhat
|

Updated on: Nov 13, 2023 | 8:03 AM

Rohit Sharma took the wicket: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದರು. ತಮ್ಮ ಮೊದಲ ಓವರ್​ನ ನಾಲ್ಕನೇ ಎಸೆತದಲ್ಲಿ ವಿಕೆಟ್ ಕಿತ್ತು ನೆದರ್ಲೆಂಡ್ಸ್ ತಂಡವನ್ನು ಆಲೌಟ್ ಮಾಡಿದರು. ರೋಹಿತ್ ವಿಕೆಟ್ ಪಡೆದ ತಕ್ಷಣ ಡಗೌಟ್​ನಲ್ಲಿದ್ದ ಅವರ ಪತ್ನಿ ರಿತಿಕಾ ಏನು ಮಾಡಿದ್ರು ನೋಡಿ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಅಜೇಯ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ 160 ರನ್​ಗಳ ಅಮೋಘ ಜಯ ಕಂಡು ಈ ಬಾರಿಯ ಟೂರ್ನಿಯಲ್ಲಿ ಆಡಿದ ಒಂಬತ್ತು ಪಂದ್ಯಗಳ ಪೈಕಿ ಒಂಬತ್ತರಲ್ಲೂ ಗೆಲುವು ಸಾಧಿಸಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಭಾರತ ಪರ ಕೊಹ್ಲಿ, ರೋಹಿತ್ (Rohit Sharma), ಗಿಲ್, ಸೂರ್ಯಕುಮಾರ್ ಬೌಲಿಂಗ್ ಮಾಡಿದರು. ಈ ಪೈಕಿ ಕೊಹ್ಲಿ, ರೋಹಿತ್ ವಿಕೆಟ್ ಕೂಡ ಪಡೆದರು. ತಮ್ಮ ಮೊದಲ ಓವರ್​ನ ಐದನೇ ಎಸೆತದಲ್ಲಿ ವಿಕೆಟ್ ಕಿತ್ತು ನೆದರ್ಲೆಂಡ್ಸ್ ತಂಡವನ್ನು ಆಲೌಟ್ ಮಾಡಿದರು. ಇದು ರೋಹಿತ್ ಅವರು ಏಕದಿನದಲ್ಲಿ 4284 ದಿನಗಳ ನಂತರ ಪಡೆದ ವಿಕೆಟ್ ಆಗಿದೆ. ವಿಕೆಟ್ ಪಡೆದ ತಕ್ಷಣ ಡಗೌಟ್​ನಲ್ಲಿದ್ದ ಹಿಟ್​ಮ್ಯಾನ್ ಪತ್ನಿ ರಿತಿಕಾ ಸಜ್ದೆ ಚಪ್ಪಾಳೆ ತಟ್ಟುತ್ತಾ, ಕುಣಿದು ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ