ಶಿವಕುಮಾರ್​ರೊಂದಿಗೆ ವೈರತ್ವ ರಾಜಕೀಯಕ್ಕೆ ಮಾತ್ರ ಸೀಮಿತವಾಗಿತ್ತು: ಸಿಪಿ ಯೋಗೇಶ್ವರ್

|

Updated on: Oct 24, 2024 | 12:27 PM

ಬೇರೆ ಜಿಲ್ಲೆಯವರು ಅಂತ ಯೋಗೇಶ್ವರ್ ನೇರವಾಗಿ ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ಆಕ್ರಮಣ ಮಾಡಿದರು. ಆದರೆ ಅವರು ಈ ಪ್ರಶ್ನೆಯನ್ನು ಮತದಾರರಿಗೆ ಹೇಳಬೇಕು. ಯಾಕೆಂದರೆ ಅವರು ಎರಡೆರಡು ಬಾರಿ ಕುಮಾರಸ್ವಾಮಿಯನ್ನು ಗೆಲ್ಲಿಸಿದ್ದಾರೆ. ಯೋಗೇಶ್ವರ್, ಕುಮಾರಸ್ವಾಮಿ ಮತ್ತು ಶಿವಕುಮಾರ್-ಎಲ್ಲರೂ ಒಕ್ಕಲಿಗರೇ!

ರಾಮನಗರ: ಸಿಪಿ ಯೋಗೇಶ್ವರ್ ಮತ್ತು ಡಿಕೆ ಶಿವಕುಮಾರ್ ನಡುವೆ ಇದ್ದ ಬದ್ಧ ರಾಜಕೀಯ ವೈರತ್ವ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಈಗ್ಯಾಕೆ ದೋಸ್ತಿ ಅಂತ ಕೇಳಿದರೆ ಯೋಗೇಶ್ವರ್ ನೀಡಿದ ಉತ್ತರ ಚಿಕ್ಕಮಕ್ಕಳಿಗೆ ಪಾಠ ಹೇಳಿದಂತಿತ್ತು. ಶಿವಕುಮಾರ್​ರೊಂದಿಗೆ ಆಸ್ತಿಪಾಸ್ತಿಗಾಗಿ ವೈರತ್ವ ಇರಲಿಲ್ಲ, ಆದು ರಾಜಕೀಯ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿತ್ತು, ಬೇರೆ ಜಿಲ್ಲೆಯ ಜನ ಬಂದು ನಮ್ಮಲ್ಲಿ ಒಡಕು, ಭಿನ್ನಾಭಿಪ್ರಾಯ ಉಂಟು ಮಾಡಲು ಪ್ರಯತ್ನಿಸಿದ್ದು ಸರಿಯೆನಿಸಲಿಲ್ಲ, ಜಿಲ್ಲೆಯ ಸಮಗ್ರತೆ, ಅಸ್ಮಿತೆ ಮತ್ತು ಅಭಿವೃದ್ಧಿಗೆ ಶಿವಕುಮಾರ್ ಅವರೊಂದಿಗೆ ಕೈ ಜೋಡಿಸಿದ್ದಾಗಿ ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಸಾರ್ವಜನಿಕ ಬದುಕು ಆರಂಭಗೊಂಡಿದ್ದೇ ಕಾಂಗ್ರೆಸ್ ಪಕ್ಷದಿಂದ: ಸಿಪಿ ಯೋಗೇಶ್ವರ್

Follow us on