ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತುಮಕೂರಿನ ಕೆಂಚನಹಳ್ಳಿ-ಸಿ ಎಸ್ ಪುರ ನಡುವಿನ ರಸ್ತೆ ಕೊಚ್ಚಿಕೊಂಡು ಹೋಯಿತು!
ರಸ್ತೆ ಕೊಚ್ಚಿಹೋಗಿರುವುದರಿಂದ ಕೆಂಚನಹಳ್ಳಿ ಮತ್ತು ಸಿ ಎಸ್ ಪುರ ನಡುವಿವ ಸಂಪರ್ಕ ಕಡಿದುಹೋಗಿದೆ. ಇನ್ನು ಅದು ಯಾವಾಗ ದುರಸ್ತಿಯಾಗುವುದೋ? ಆದರೆ. ಇದು ಚುನಾವಣಾ ವರ್ಷವಾಗಿರರುವುದರಿಂದ ಬೇಗ ರಿಪೇರಿಯಗುವ ಸಾಧ್ಯತೆಯಂತೂ ಇದ್ದೇ ಇದೆ.
Tumakuru: ರಾಜ್ಯದಲ್ಲಿ ವರುಣನ (rains) ಆರ್ಭಟ ಮುಂದುವರಿದೆ. ಬುಧವಾರ ರಾತ್ರಿ ಹಲವಾರು ಭಾಗಗಳಲ್ಲಿ ಮಳೆ ಧಾರಾಕಾರವಾಗಿ ಸುರಿದು ಅವಾಂತಗಳು ಸೃಷ್ಟಿಯಾಗಿವೆ. ಬೆಂಗಳೂರಿನಿಂದ ಸುಮಾರು 60 ಕಿಮೀ ದೂರವಿರುವ ತುಮಕೂರು (Tumakuru) ಜಿಲ್ಲೆಯಿಡೀ ರಾತ್ರಿ ಮಳೆ ಸುರಿದ ಮಾಹಿತಿ ನಮಗೆ ಸಿಕ್ಕಿದೆ. ನೀವು ಇಲ್ಲಿ ವೀಕ್ಷಿಸುತ್ತಿರುವುದು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೆಂಚನಹಳ್ಳಿ (Kenchanhalli) ಗ್ರಾಮದ ರಸ್ತೆ. ಅದೆಲ್ಲಿದೆ ಕಾಣುತ್ತಿಲ್ಲವಲ್ಲ ಅಂತ ಕೇಳಬೇಡಿ. ಕಳೆದ ರಾತ್ರಿ ಸುರಿದ ಮಳೆಗೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ಮಳೆ ಯಾವ ಪರಿ ಸುರಿದಿದೆ ಅಂತ ವಿಡಿಯೋ ನೋಡಿ ಅರ್ಥಮಾಡಿಕೊಳ್ಳಬಹುದು. ಬಹಳ ಜೋರಾಗಿ ಮಳೆ ಸುರಿದು ಅದು ನಿಂತಮೇಲೆ ವಾತಾವರಣ ಮತ್ತು ಸ್ಥಿತಿ ಹೇಗಿರುತ್ತದೆ ಗ್ರಾಮೀಣ ಭಾಗದಲ್ಲಿ ಚೆನ್ನಾಗಿ ಗೊತ್ತಾಗುತ್ತದೆ.
ಹಳ್ಳಕೊಳ್ಳಗಳು ತುಂಬಿ ಹರಿಯುವಾಗ ಉಂಟಾಗುವ ಭೋರ್ಗರೆತ, ಹರಿಯುವ ಸಣ್ಣ ಕಾಲುವೆಗಳು ಮಾಡುವ ಜುಳು ಜುಳು ಸದ್ದು, ಕಪ್ಪೆಗಳು ವಟಗುಡುವಿಕೆ ಮತ್ತು ರಸ್ತೆಗಳ ಅಕ್ಕಪಕ್ಕಗಳಲ್ಲಿ ನೆಗೆದಾಟ, ಗಾಳಿ ಬೀಸಿದಾಗ ಮರದ ಎಲೆಗಳ ಮೇಲೆ ಜಮಾಗೊಂಡಿದ್ದ ಮಳೆನೀರಿನ ಹನಿಗಳು ನೆಲಕ್ಕೆ ಬೀಳುವುದು-ಮನಸ್ಸಿಗೆ ಮುದ ನೀಡುವ ಇಂಥ ದೃಶ್ಯಗಳನ್ನು ನಗರ ಪ್ರದೇಶಗಳಲ್ಲಿ ನೋಡುವುದು ಸಾಧ್ಯವಿಲ್ಲ ಮಾರಾಯ್ರೇ.
ನಗರಗಳಲ್ಲಾದರೆ, ಮಳೆ ನಿಂತ ಕೂಡಲೇ ಕೇವಲ ಮೋಟಾರು ವಾಹನಗಳ ಓಡುವ ಮತ್ತು ಹಾರ್ನ್ಗಳ ಸದ್ದು ಕೇಳಿಸುತ್ತದೆ. ಇಲ್ಲಿ ಜನರಿಗೆ ಮನೆ ಇಲ್ಲವೇ ಕಚೇರಿಯನ್ನು ತಲುಪುವ ಧಾವಂತ. ಹಾಗಾಗೇ, ಕೆಲವಷ್ಟು ಸಂಗತಿಗಳನ್ನು ಹಳ್ಳಿಗಳಲ್ಲಿ ಮಾತ್ರ ಅನುಭವಿಸುವುದು ಸಾಧ್ಯ.
ಓಕೆ ಕೆಂಚನಹಳ್ಳಿ ರಸ್ತೆ ವಿಷಯಕ್ಕೆ ಬರೋಣ. ರಸ್ತೆ ಕೊಚ್ಚಿಹೋಗಿರುವುದರಿಂದ ಕೆಂಚನಹಳ್ಳಿ ಮತ್ತು ಸಿ ಎಸ್ ಪುರ ನಡುವಿವ ಸಂಪರ್ಕ ಕಡಿದುಹೋಗಿದೆ. ಇನ್ನು ಅದು ಯಾವಾಗ ದುರಸ್ತಿಯಾಗುವುದೋ? ಆದರೆ. ಇದು ಚುನಾವಣಾ ವರ್ಷವಾಗಿರರುವುದರಿಂದ ಬೇಗ ರಿಪೇರಿಯಗುವ ಸಾಧ್ಯತೆಯಂತೂ ಇದ್ದೇ ಇದೆ.
ಇದನ್ನೂ ಓದಿ: ಮಂಗಳವಾರ ಸುರಿದ ಭಾರಿ ಮಳೆಗೆ ತುಮಕೂರು ಜಿಲ್ಲೆಯಲ್ಲಿ ಕುಸಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತ