ಮಂಗಳೂರು: ಜಿಲ್ಲೆಗೆ ಸಿಎಂ ಭೇಟಿ ಮತ್ತು ಶುಕ್ರವಾರದ ನಮಾಜ್ ಗಮನದಲ್ಲಿಟ್ಟುಕೊಂಡೇ ಬ್ಯಾಂಕ್ ದರೋಡೆ!
ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಅಸೆಂಬ್ಲಿಗೆ ಹೋದ ನಂತರ ಆ ಪಾಟಿ ಭದ್ರತೆ ಯಾಕೆ ಬೇಕಾಗುತ್ತದೆ? ವೋಟು ಕೇಳುವಾಗ ಅವರಿಗೆ ಸೆಕ್ಯುರಿಟಿ ಬೇಕಾಗಿಲ್ಲ, ಗ್ರಾಮಗ್ರಾಮಗಳಿಗೆ ತೆರಳಿ ಕೈಮುಗಿದು ವೋಟು ಕೇಳುತ್ತಾರೆ. ಅಗ ಬೇಕಿಲ್ಲದ ಸೆಕ್ಯುರಿಟಿ ಗೆದ್ದಮೇಲೆ ಯಾಕೆ ಬೇಕು ಸ್ವಾಮಿ? ಯಾರನ್ನೂ ದೂಷಿಸುವ ಪ್ರಯತ್ನ ನಮ್ಮದಲ್ಲ, ಅದರೆ ಬೀದರ್ ಮತ್ತು ಮಂಗಳೂರು ದರೋಡೆಗಳ ನಂತರ ಜನಪ್ರತಿನಿಧಿಗಳು ಯೋಚಿಸಬೇಕಿದೆ.
ಮಂಗಳೂರು: ಉಳ್ಳಾಲದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ಹಗಲು ದರೋಡೆಯನ್ನು ನಮ್ಮ ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸಬೇಕಿದೆ. ನಮ್ಮ ಮಂಗಳೂರು ಪ್ರತಿನಿಧಿ ಹೇಳುವ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿದ್ದ ಕಾರಣ ಮಂಗಳೂರು ಪೊಲೀಸ್ ವ್ಯವಸ್ಥೆಯನ್ನು ಅವರ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿತ್ತು. ನಗರ ಮತ್ತು ಸುತ್ತಮುತ್ತ ಪ್ರದೇಶಗಳ ಪೊಲೀಸರೆಲ್ಲ ಸಿಎಂ ಹಿಂದೆ! ನಿನ್ನೆ ಶುಕ್ರವಾರದ ನಮಾಜ್ ನಿಮಿತ್ತ ಈ ನಿರ್ದಿಷ್ಟ ರಸ್ತೆಯಲ್ಲಿ ಜನರ ಓಡಾಟವೂ ಕಡಿಮೆಯಾಗಿತ್ತು. ಎರಡೂ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡೇ ಕಾರಿನಲ್ಲಿ ಬಂದಿದ್ದ 6 ದರೋಡೆಕೋರರು ಬ್ಯಾಂಕಿನ ಲೂಟಿ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಗಳೂರು: ಬೀದರ್ ಬಳಿಕ ಉಳ್ಳಾಲದಲ್ಲೂ ಹಾಡಹಗಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ