‘ಸಖತ್ ಆಗಿದೆ ಗುರೂ, ಆದ್ರೆ ಹೇಳೋಕಾಗಲ್ಲ ಅಷ್ಟೇ’: RRR ಚಿತ್ರ ನೋಡಿ ಫಸ್ಟ್ ಪ್ರತಿಕ್ರಿಯೆ ನೀಡಿದ ಪ್ರೇಕ್ಷಕರು
‘ಆರ್ಆರ್ಆರ್’ ಸಿನಿಮಾದ ಕಲಾವಿದರ ಅಭಿನಯ, ಮನಸೆಳೆಯುವ ಕಥೆ, ರಾಜಮೌಳಿ ಅವರ ನಿರ್ದೇಶನವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಮ್ ಚರಣ್ (Ram Charan), ಜ್ಯೂ. ಎನ್ಟಿಆರ್ (Jr NTR) ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಆರ್ಆರ್ಆರ್’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆಗಳಿಂದಲೂ ಸೂಪರ್ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಿರ್ದೇಶಕ ರಾಜಮೌಳಿ ಅವರ ಕೆಲಸಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಕರ್ನಾಟಕದಲ್ಲೂ ‘ಆರ್ಆರ್ಆರ್’ (RRR Movie) ಸಿನಿಮಾದ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭ ಆಗಿತ್ತು. ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮುಗಿಬಿದ್ದು ಟಿಕೆಟ್ ಖರೀದಿಸಿ, ಮೊದಲ ಶೋ ಕಣ್ತುಂಬಿಕೊಂಡ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕಲಾವಿದರ ಅಭಿನಯ, ಮನಸೆಳೆಯುವ ಕಥೆ, ರಾಜಮೌಳಿ ಅವರ ನಿರ್ದೇಶನವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ನಟಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ:
ಕರುನಾಡಿನಲ್ಲಿ ಮಧ್ಯರಾತ್ರಿಯಿಂದಲೇ ಅಬ್ಬರಿಸಿದ ‘RRR’; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಪೂರ್ತಿ ವಿವರ..
RRR Review: ಆರ್ಆರ್ಆರ್ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

