ಕಂಡು ಕೇಳರಿಯದಂತಹ ‘ಆರ್​ಆರ್​ಆರ್​’ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ಸಿದ್ಧತೆ: ಇಲ್ಲಿದೆ ವಿಡಿಯೋ

RRR Pre-release Event: ಇದು ದೇಶದಲ್ಲೇ ಅತಿ ದೊಡ್ಡ ಪ್ರೀ-ರಿಲೀಸ್​ ಇವೆಂಟ್​ ಎಂದು ‘ಆರ್​ಆರ್​ಆರ್​​’ ತಂಡ ಹೇಳಿಕೊಂಡಿದೆ. ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ.

TV9kannada Web Team

| Edited By: Madan Kumar

Mar 19, 2022 | 9:33 AM

ಚಿಕ್ಕಬಳ್ಳಾಪುರದ (Chikkaballapura) ಅಗಲಗುರ್ಕಿ ಗ್ರಾಮದಲ್ಲಿ ಅದ್ದೂರಿಯಾಗಿ ‘ಆರ್​ಆರ್​ಆರ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ (RRR Movie Pre-release Event) ಮಾಡಲಾಗುತ್ತಿದೆ. ಇಂದು (ಮಾ.19) ಸಂಜೆ 100 ಎಕರೆ ಜಾಗದಲ್ಲಿ ಅಂದಾಜು 2ರಿಂದ 3 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್​, ನಟ ಶಿವರಾಜ್​ಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಈ ಇವೆಂಟ್​ಗೆ ಹಾಜರಿ ಹಾಕಲಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳ ಅಭಿಮಾನಿಗಳು, ಮಾಧ್ಯಮದವರು ಸಹ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ಇದು ದೇಶದಲ್ಲೇ ಅತಿ ದೊಡ್ಡ ಪ್ರೀ-ರಿಲೀಸ್​ ಇವೆಂಟ್​ ಎಂದು ‘ಆರ್​ಆರ್​ಆರ್​​’ (RRR Movie) ತಂಡ ಹೇಳಿಕೊಂಡಿದೆ. ಲಕ್ಷಾಂತರ ಜನರು ಸೇರುವ ಈ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಟಾಲಿವುಡ್​ ನಟರಾದ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸೇರಿದಂತೆ ಅನೇಕರು ಈ ಇವೆಂಟ್​ನಲ್ಲಿ ಭಾಗಿ ಆಗಲಿದ್ದಾರೆ. ಈ ಬೃಹತ್​ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:

RRR ಪ್ರೀ-ರಿಲೀಸ್​ ಇವೆಂಟ್​ಗೆ ಕ್ಷಣಗಣನೆ: ಸಿಎಂ, ಶಿವಣ್ಣ ಬರುವ ಈ ಸಮಾರಂಭಕ್ಕೆ ಹೇಗಿದೆ ಭದ್ರತೆ?

ಒಂದು ದಿನ ಮೊದಲೇ ನೋಡಬಹುದು RRR ಚಿತ್ರ; ರಾಜಮೌಳಿ ಟೀಮ್​ ಮಾಡಿರುವ ಪ್ಲ್ಯಾನ್ ಏನು?

Follow us on

Click on your DTH Provider to Add TV9 Kannada