ಚಿಕ್ಕಬಳ್ಳಾಪುರದಲ್ಲಿ RRR ಜಾತ್ರೆ; ಬೆಂಗಳೂರಿಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಬಗ್ಗೆ ಇಲ್ಲಿದೆ ಮಾಹಿತಿ
RRR Movie Pre-release Event: ‘ಆರ್ಆರ್ಆರ್’ ಪ್ರೀ-ರಿಲೀಸ್ ಇವೆಂಟ್ನಲ್ಲಿ ಲಕ್ಷಾಂತರ ಜನರು ಭಾಗಿ ಆಗಲಿದ್ದಾರೆ. ಇದರಿಂದಾಗಿ ಸಹಜವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
‘ಆರ್ಆರ್ಆರ್’ ಸಿನಿಮಾ (RRR Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ಇಂದು (ಮಾ.19) ಸಂಜೆ ಪ್ರೀ-ರಿಲೀಸ್ ಇವೆಂಟ್ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ಈ ಇವೆಂಟ್ ನಡೆಯಲಿದೆ. ಅಂದಾಜು ನೂರು ಎಕರೆ ಜಾಗದಲ್ಲಿ ‘ಆರ್ಆರ್ಆರ್’ ಪ್ರೀ-ರಿಲೀಸ್ ಇವೆಂಟ್ಗೆ (RRR Movie Pre-release Event) ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಇದರಲ್ಲಿ ಭಾಗಿ ಆಗಲಿದ್ದಾರೆ. ಇದರಿಂದಾಗಿ ಸಹಜವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ಪೊಲೀಸರು ಬದಲಿ ಮಾರ್ಗವನ್ನು ಸೂಚಿಸಿದ್ದಾರೆ. ಹೈದರಾಬಾದ್, ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿಗೆ ಹೋಗುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಗೌರಿ ಬಿದನೂರಿನಿಂದ ಬೆಂಗಳೂರಿಗೆ ಬರುವವರಿಗೂ ಕೂಡ ಕೆಲವು ಬೇರೆ ಮಾರ್ಗವನ್ನು ಸೂಚಿಸಲಾಗಿದೆ. ಆ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ (Chikkaballapura SP Mithun Kumar) ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ‘ಆರ್ಆರ್ಆರ್’ ಇವೆಂಟ್ನಲ್ಲಿ ಭಾಗವಹಿಸುವವರಿಗೆ ಪಾಸ್ ಕಡ್ಡಾಯ. ವಿಐಪಿ, ವಿವಿಐಪಿ ಮುಂತಾದ ಪಾಸ್ಗಳ ಆಧಾರದ ಮೇಲೆ ಬೇರೆ ಬೇರೆ ಮಾರ್ಗಗಳ ಮೂಲಕ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗುವುದು.
ಇದನ್ನೂ ಓದಿ:
RRR ಪ್ರೀ-ರಿಲೀಸ್ ಇವೆಂಟ್ಗೆ ಕ್ಷಣಗಣನೆ: ಸಿಎಂ, ಶಿವಣ್ಣ ಬರುವ ಈ ಸಮಾರಂಭಕ್ಕೆ ಹೇಗಿದೆ ಭದ್ರತೆ?
ಕಂಡು ಕೇಳರಿಯದಂತಹ ‘ಆರ್ಆರ್ಆರ್’ ಪ್ರೀ ರಿಲೀಸ್ ಇವೆಂಟ್ಗೆ ಭರ್ಜರಿ ಸಿದ್ಧತೆ: ಇಲ್ಲಿದೆ ವಿಡಿಯೋ