Anjanadri Betta: ಕೇವಲ ಎರಡು ತಿಂಗಳಲ್ಲಿ ಅಂಜನಾದ್ರಿ ಬೆಟ್ಟ ಹನುಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆ ರೂ. 28,79,910!

|

Updated on: May 26, 2023 | 6:01 PM

ಭಗವಾನ್ ಹನುಮಾನನ ಜನ್ಮಸ್ಥಳವೆಂದು ಪ್ರತೀತಿ ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ ದೇಶದ ಎಲ್ಲ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.

ಕೊಪ್ಪಳ: ಜಿಲ್ಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ (Anjanadri Betta) ಮತ್ತು ಅಲ್ಲಿರುವ ಹನುಮನ ದೇವಸ್ಥಾನದ (Hanuman temple) ಖ್ಯಾತಿ ದೇಶದೆಲ್ಲೆಡೆ ಹಬ್ಬಿದೆ. ಹಾಗಾಗೇ, ಭಗವಾನ್ ಹನುಮಾನ್ ನ (Bahwan Hanuman) ಜನ್ಮಸ್ಥಳವೆಂದು ಪ್ರತೀತಿ ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ ದೇಶದ ಎಲ್ಲ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಆಡಳಿತ ವರ್ಗ ಹೇಳುವ ಪ್ರಕಾರ ಕೇವಲ ಎರಡು ತಿಂಗಳಲ್ಲಿ ಹುಂಡಿ ತುಂಬುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಗಳ ಸಮಕ್ಷಮ ಇಂದು ತುಂಬಿದ ಹುಂಡಿಯಿಂದ ಭಕ್ತರು ಹಾಕಿದ ಕಾಣಿಕೆಯನ್ನು ಹೊರತೆಗೆದು ಎಣಿಸಲಾಯಿತು. ಆಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ರೂ. 28,79,910

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on