AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಸ್ವಾಗತಿಸಲು ಬಂದಿದ್ದ ಉದ್ಯಮಿ ಸೂಟ್ಕೇಸ್​ನಲ್ಲಿ ಹಣ ಪತ್ತೆ, ನೋಟಿಸ್ ನೀಡಿ ಹಣ ಸೀಜ್

ಡಿಕೆ ಶಿವಕುಮಾರ್ ಸ್ವಾಗತಿಸಲು ಬಂದಿದ್ದ ಉದ್ಯಮಿ ಸೂಟ್ಕೇಸ್​ನಲ್ಲಿ ಹಣ ಪತ್ತೆ, ನೋಟಿಸ್ ನೀಡಿ ಹಣ ಸೀಜ್

ರಮೇಶ್ ಬಿ. ಜವಳಗೇರಾ
|

Updated on:Apr 23, 2023 | 6:41 PM

Share

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್​ ಆಪ್ತನ ಬ್ಯಾಗ್ ನಲ್ಲಿ 50 ಸಾವಿರ ರೂಪಾಯಿ ಪತ್ತೆ
  • ಯುಬಿ ಶೆಟ್ಟಿ ಕಾರು ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳಿಗೆ ಸಿಕ್ಕ 50,000 ನಗದು
  • ಡಿಕೆ ಶಿವಕುಮಾರ್ ಅವರನ್ನು ಬೈಂದೂರಿಗೆ ಸ್ವಾಗತಿಸಲು ಆಗಮಿಸಿದ್ದ ಯುಬಿ ಶೆಟ್ಟಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರನ್ನು ಬರಮಾಡಿಕೊಳ್ಳಲು ಬಂದಿದ್ದ ಉದ್ಯಮಿ ಕಾರನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದು, ಈ ವೇಳೆ ಸೂಟ್ಕೇಸ್​ನಲ್ಲಿ ನಗದು ಹಣ ಪತ್ತೆಯಾಗಿದೆ.

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಬಂದಿದ್ದ ಆಪ್ತ ಉದ್ಯಮಿ ಯುಬಿ ಶೆಟ್ಟಿ ಸೂಟ್ಕೇಸ್​ನಲ್ಲಿ ಹಣ ಪತ್ತೆಯಾಗಿದೆ. ಇಂದು(ಏಪ್ರಿಲ್ 23) ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಯುಬಿ ಶೆಟ್ಟಿ ಅವರು ಬೈಂದೂರಿನ ಹರೇ ಶಿರೂರು ಹೆಲಿಪ್ಯಾಡ್ ಬಳಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಯುಬಿ ಶೆಟ್ಟಿ ಆಗಮಿಸಿದ ಕಾರನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದು, ಈ ವೇಳೆ ಕಾರಿನಲ್ಲಿದ್ದ ಸೂಟ್ಕೇಸ್ ನಲ್ಲಿ 50,000 ರೂ. ನಗದು ಹಣ ಇರುವುದು ಪತ್ತೆಯಾಗಿದೆ. ಹಣವನ್ನ ಸೀಜ್ ಮಾಡಿಕೊಂಡಿರುವ ಅಧಿಕಾರಿಗಳು. ಯುಬಿ ಶೆಟ್ಟಿ ಅವರಿಗೆ ನೋಟಿಸ್ ನೀಡಿ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ​ ಬಂದ ಹೆಲಿಕಾಪ್ಟರ್ ಇಂಚಿಂಚೂ ಪರಿಶೀಲಿಸಿದ ಅಧಿಕಾರಿಗಳು, ಫೋಟೋಗಳನ್ನ ಹರಿಬಿಟ್ಟ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

Published on: Apr 23, 2023 06:32 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More