RSS ನೋಂದಣಿ ವಿವಾದ: ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಆರ್​​. ಅಶೋಕ್​​ ಕೌಂಟರ್​​

Edited By:

Updated on: Aug 27, 2026 | 4:24 PM

ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್‌ಎಸ್‌ಎಸ್ ನೋಂದಣಿ ಹೇಳಿಕೆಗೆ ವಿಪಕ್ಷ ನಾಯಕ ಅಶೋಕ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನದಲ್ಲಿ ನೋಂದಣಿ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ. ಅಂಬೇಡ್ಕರ್ ಅವರ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳುವಂತೆ ಪ್ರಿಯಾಂಕ್ ಖರ್ಗೆಗೆ ಸವಾಲೆಸೆದ ಅಶೋಕ್, ಬ್ರಿಟಿಷರ ಆಳ್ವಿಕೆಯಲ್ಲೇ ಆರ್‌ಎಸ್‌ಎಸ್ ಸ್ಥಾಪನೆಯಾಗಿದೆ, ಅದನ್ನು ಯಾರೂ ಪ್ರಶ್ನಿಸಿರಲಿಲ್ಲ ಎಂದಿದ್ದಾರೆ.

ಬೆಂಗಳೂರು, ಆಗಸ್ಟ್​​ 27: RSS ನೋಂದಣಿ ಸಂಬಂಧ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ಕೌಂಟರ್​​ ನೀಡಿದ್ದಾರೆ. ಕಾಂಗ್ರೆಸ್​ನವರು ಯಾವುದೋ ಸಣ್ಣ ಪುಸ್ತಕ ಹಿಡಿದು ಬರುವ ಬದಲು, ಅಂಬೇಡ್ಕರ್ ಬರೆದಿರುವ ದೊಡ್ಡ ಪುಸ್ತಕದ ಸಂವಿಧಾನ ಓದಿ ಬರಲಿ. ಅದರಲ್ಲಿ ರಿಜಿಸ್ಟರ್ ಆಗಲೇಬೇಕು ಎನ್ನುವುದು ಎಲ್ಲಿದೆ ಎಂದು ತಿಳಿಸಲಿ. ಬ್ರಿಟಿಷರ ಆಳ್ವಿಕೆ ಇದ್ದಾಗಲೇ ಆರ್​ಎಸ್​ಎಸ್ ಸ್ಥಾಪನೆಯಾಗಿತ್ತು. ಅವರೇ ಏನೂ ಮಾಡಲು ಆಗಲಿಲ್ಲ. ಈ ಹಿಂದೆ ಪ್ರಧಾನಿ ಆಗಿದ್ದವರು ಕೂಡ ಏನೂ ಮಾಡಲು ಆಗಲಿಲ್ಲ ಎಂದವರು ಹೇಳಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ ಕ್ಲಬ್, ಚರ್ಚ್ ಯಾವುದೂ ರಿಜಿಸ್ಟರ್ ಆಗಿಲ್ಲ. ಇವರ ಅಹಿಂದ ಸಿದ್ದರಾಮಯ್ಯ ಮಾಡಿದ್ದು, ಅದೂ ನೋಂದಣಿ ಆಗಿಲ್ಲ. ಮೊಹರಂ ಮೆರವಣಿಗೆ ಮಾಡಿದ್ರಲ್ಲಾ, ಅದಕ್ಕೆ ಮೆಂಬರ್​ಶಿಪ್ ಇದ್ಯಾ? ಪ್ರಿಯಾಂಕ್ ಪ್ರಕಾರ ಮೆರವಣಿಗೆ ಮಾಡಬೇಕು ಅಂದ್ರೆ ನೋಂದಣಿ ಆಗಬೇಕು. ಹಾಗಾದ್ರೆ ನಿನ್ನೆ ಮೆರವಣಿಗೆ ಮಾಡಿದವರು ರಿಜಿಸ್ಟರ್ ಮಾಡಿದ್ರಾ? ಎಂದು ಅಶೋಕ್​​ ಟಾಂಗ್​​ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Aug 27, 2026 04:24 PM
Loading...
Unable to load recommendations.
Follow Us