AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,4,6,6... ಬೈರ್​ಸ್ಟೋವ್ ಬಿರುಗಾಳಿ ಬ್ಯಾಟಿಂಗ್

6,6,6,4,6,6… ಬೈರ್​ಸ್ಟೋವ್ ಬಿರುಗಾಳಿ ಬ್ಯಾಟಿಂಗ್

ಝಾಹಿರ್ ಯೂಸುಫ್
|

Updated on: Jan 06, 2026 | 11:58 AM

Share

Pretoria Capitals vs Sunrisers Eastern Cape: 177 ರನ್​ಗಳ ಗುರಿ ಪಡೆದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಪರ ಜಾನಿ ಬೈರ್​ಸ್ಟೋವ್ ಹಾಗೂ ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಕ್ಯಾಪಿಟಲ್ಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 10 ಓವರ್​ಗಳ ಮುಕ್ತಾಯದ ವೇಳೆಗೆ ತಂಡದ ಸ್ಕೋರ್ 105 ಕ್ಕೆ ಬಂದು ನಿಂತಿತು.

ಸೌತ್ ಆಫ್ರಿಕಾ ಟಿ20 ಟೂರ್ನಿಯಲ್ಲಿ ಜಾನಿ ಬೈರ್​ಸ್ಟೋವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಕೂಡ ಒಂದೇ ಓವರ್​ನಲ್ಲಿ 34 ರನ್​ ಚಚ್ಚುವ ಮೂಲಕ. ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಹಾಗೂ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.

177 ರನ್​ಗಳ ಗುರಿ ಪಡೆದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಪರ ಜಾನಿ ಬೈರ್​ಸ್ಟೋವ್ ಹಾಗೂ ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಕ್ಯಾಪಿಟಲ್ಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 10 ಓವರ್​ಗಳ ಮುಕ್ತಾಯದ ವೇಳೆಗೆ ತಂಡದ ಸ್ಕೋರ್ 105 ಕ್ಕೆ ಬಂದು ನಿಂತಿತು.

ಇನ್ನು ಕೇಶವ್ ಮಹಾರಾಜ್ ಎಸೆದ 11ನೇ ಓವರ್​ನಲ್ಲಿ ಜಾನಿ ಬೈರ್​ಸ್ಟೋವ್ 5 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 34 ರನ್​ ಚಚ್ಚಿದರು. ಈ ಮೂಲಕ ಜಾನಿ ಬೈರ್​ಸ್ಟೋವ್ 45 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 85 ರನ್ ಬಾರಿಸಿದರು.

ಮತ್ತೊಂದೆಡೆ ಕ್ವಿಂಟನ್ ಡಿಕಾಕ್ 41 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 79 ರನ್ ಚಚ್ಚಿದರು. ಈ ಮೂಲಕ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 14.2 ಓವರ್​ಗಳಲ್ಲಿ 177 ರನ್ ಬಾರಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.