Video: ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಪ್ರತಿಮೆಗಳಿಂದ 4.54 ಕೆಜಿ ಚಿನ್ನದ ಲೇಪನ ಕಾಣೆಯಾದ ಪ್ರಕರಣದಲ್ಲಿ SIT ತನಿಖೆ ಚುರುಕುಗೊಂಡಿದೆ. ವೈಜ್ಞಾನಿಕ ಪರೀಕ್ಷೆಗಳಿಗಾಗಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಈಗಾಗಲೇ ವಶದಲ್ಲಿದ್ದಾರೆ. ಈ ಬೃಹತ್ ಚಿನ್ನ ಕಳ್ಳತನದ ಮೂಲವನ್ನು ಪತ್ತೆಹಚ್ಚಲು ತನಿಖಾ ತಂಡ ಕಾರ್ಯಪ್ರವೃತ್ತವಾಗಿದೆ.
ಶಬರಿಮಲೆ ದೇವಸ್ಥಾನದ (Sabarimala Gold Plating Scam) ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನದ ಲೇಪನ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ. ಇದೀಗ ಎಸ್ಐಟಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ದೇವಾಲಯದಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದೆ. ಗರ್ಭಗುಡಿಯ ದ್ವಾರಪಾಲಕ ಶಿಲ್ಪ ಮತ್ತು ಚಿನ್ನದಿಂದ ಆವೃತವಾದ ಮರದ ಬಾಗಿಲಿನ ರಚನೆಯಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ವಿಡಿಯೋವೊಂದು ಎಎನ್ಐ ಹಂಚಿಕೊಂಡಿದೆ. ತನಿಖೆಯ ಭಾಗವಾಗಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅವರನ್ನು ಈಗಾಗಲೇ ಎಸ್ಐಟಿ ವಶಪಡೆದುಕೊಂಡಿದ್ದು ತನಿಖೆಯನ್ನು ನಡೆಸುತ್ತಿದೆ. ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಗೆಯಲ್ಲಿದ್ದ ಬರೋಬ್ಬರಿ 4.54 ಕೆಜಿ ಲೇಪನ ಕಾಣೆಯಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

