ದಿಲ್ಲಿ ಯಾತ್ರೆ ಮುಗಿಸಿ ಬೆಂಗಳೂರಿನತ್ತ ಡಿಕೆ ಶಿವಕುಮಾರ್: ನವೆಂಬರ್ ಕ್ರಾಂತಿನಾ? ಶಾಂತಿನಾ?
ಕರ್ನಾಟಕ ರಾಜ್ಯ ರಾಜಕಾರಣದ ಆಟ ದೆಹಲಿಯಲ್ಲಿ ಜೋರಾಗಿದೆ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಂದು ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮುಂದೆ ಸಂಪುಟ ಪುನಾರಚನೆ ಪ್ರಸ್ತಾಪ ಇಟ್ಟಿದ್ದರು. ಇದಾದ ಬಳಿಕ ಸಿಎಂ ವಾಪಸಾದ್ರೆ, ಡಿಕೆ ಮಾತ್ರ ದೆಹಲಿಯಲ್ಲಿಯೇ ಠಿಕಾಣಿ ಹೂಡಿ ಇದೀಗ ಬೆಂಗಳೂರಿನತ್ತ ವಾಪಸ್ ಆಗುತ್ತಿದ್ದಾರೆ.
ನವದೆಹಲಿ, (ನವೆಂಬರ್ 17): ಕರ್ನಾಟಕ ರಾಜ್ಯ ರಾಜಕಾರಣದ ಆಟ ದೆಹಲಿಯಲ್ಲಿ ಜೋರಾಗಿದೆ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಂದು ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮುಂದೆ ಸಂಪುಟ ಪುನಾರಚನೆ ಪ್ರಸ್ತಾಪ ಇಟ್ಟಿದ್ದರು. ಇದಾದ ಬಳಿಕ ಸಿಎಂ ವಾಪಸಾದ್ರೆ, ಡಿಕೆ ಮಾತ್ರ ದೆಹಲಿಯಲ್ಲಿಯೇ ಠಿಕಾಣಿ ಹೂಡಿ ಇದೀಗ ಬೆಂಗಳೂರಿನತ್ತ ವಾಪಸ್ ಆಗುತ್ತಿದ್ದಾರೆ.
ಸುಮ್ನೆ ಬರಿಗೈನಲ್ಲಿ ವಾಪಸ್ ಆಗುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಹೋದರ ಡಿಕೆ ಸುರೇಶ್ ಜೊತೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿದ್ದಾರೆ. ಡಿಕೆ ಬ್ರದರ್ಸ್ ಖರ್ಗೆ ಜೊತೆಗೆ ಸರಿಸುಮಾರು 50 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿರುವ ಮಾಹಿತಿ ಸಿಕ್ಕಿದೆ. ಆದ್ರೆ ಡಿಕೆ ಮಾತ್ರ, ನಮ್ಮ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಅಂತಿದ್ದಾರೆ.
ಇನ್ನು ಇಂದು (ನವೆಂಬರ್ 17) ದೆಹಲಿಗೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಸಹ ಡಿಕೆ ಶಿವಕುಮಾರ್ ಭೇಟಿ ಮಾಡಿ ಬಳಿಕ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ.
ಒಟ್ಟಿನಲ್ಲಿ ಡಿಕೆ ಬ್ರದರ್ಸ್ ಖರ್ಗೆ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎಂದು ಕಾದುನೋಡಬೇಕಿದೆ.

