ಸಫಾರಿಯಲ್ಲಿ ನೀರಾನೆ ಬಾಯಿಗೆ ಪ್ಲಾಸ್ಟಿಕ್ ಎಸೆದ ಪ್ರವಾಸಿಗರು; ವಿಡಿಯೋಗೆ ನೆಟ್ಟಿಗರ ಆಕ್ರೋಶ

|

Updated on: Jul 10, 2024 | 5:20 PM

ಸಫಾರಿ ಹೋಗಿದ್ದ ಪ್ರವಾಸಿಗರು ಹಿಪ್ಪೋಪೊಟಮಸ್ ಅಥವಾ ನೀರಾನೆಯ ಬಾಯಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಫಾರಿ ಹೋದ ಸಂದರ್ಭದಲ್ಲಿ ನಾವು ಅಲ್ಲಿನ ಪರಿಸರವನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಆದರೆ, ವ್ಯಕ್ತಿಯೊಬ್ಬ ಸಫಾರಿ ವೇಳೆ ತನ್ನ ಬಳಿ ಬಂದ ನೀರಾನೆಯ ಬಾಯಿಗೆ ಪ್ಲಾಸ್ಟಿಕ್ ಚೀಲವನ್ನು ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಾವು ನಮ್ಮ ಅಗತ್ಯಗಳಿಗಾಗಿ ಅಮಾಯಕ ಪ್ರಾಣಿಗಳನ್ನು ನೋಯಿಸುತ್ತಿದ್ದೇವೆ ಮತ್ತು ಕೊಲ್ಲುತ್ತಿದ್ದೇವೆ. ದನಗಳಂತಹ ಹೆಚ್ಚಿನ ಪ್ರಾಣಿಗಳು ಆಹಾರಕ್ಕಾಗಿ ಮನುಷ್ಯರ ಮೇಲೆ ಅವಲಂಬಿತವಾಗಿವೆ. ಆದರೆ, ನಮ್ಮಲ್ಲಿ ಅನೇಕರು ಪ್ರಾಣಿಗಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬರು ಹಿಪ್ಪೋ ಬಾಯಿಗೆ ಪ್ಲಾಸ್ಟಿಕ್ ಚೀಲವನ್ನು ಎಸೆಯುವ ವಿಡಿಯೋ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಜಾವಾದ ಬೋಗೋರ್‌ನಲ್ಲಿರುವ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಆತ ಕೊಟ್ಟ ಪ್ಲಾಸ್ಟಿಕನ್ನು ಯಾವುದೋ ತಿಂಡಿಯೆಂದು ಗ್ರಹಿಸಿ ಆ ನೀರಾನೆ ಜಗಿಯುತ್ತಿರುವುದನ್ನು ನಾವು ನೋಡಬಹುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on