‘ಬಾಹುಬಲಿಗೆ ಕಟ್ಟಪ್ಪ, ಕೆಜಿಎಫ್ಗೆ ಅಯ್ಯಪ್ಪ’ ಎಂದ ಸಾಯಿಕುಮಾರ್
‘ಕೆಜಿಎಫ್’ನಲ್ಲಿಅಯ್ಯಪ್ಪ ಅವರು ಮಾಡಿದ ಪಾತ್ರ ಹೈಲೈಟ್ ಆಗಿದೆ. ಅವರು ವಾನರನಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅಯ್ಯಪ್ಪ ಅವರ ಸಹೋದರ ಸಾಯಿ ಕುಮಾರ್ ಮಾತನಾಡಿದ್ದಾರೆ.
‘ಬಾಹುಬಲಿ’ ಸರಣಿಯಲ್ಲಿ (Bahubali Movie) ಕಟ್ಟಪ್ಪನ ಪಾತ್ರ ಸಖತ್ ಹೈಲೈಟ್ ಆಗಿತ್ತು. ನಿಯತ್ತಿಗೆ ಮತ್ತೊಂದು ಹೆಸರು ಕಟ್ಟಪ್ಪ. ಆಸ್ಥಾನದಲ್ಲಿ ಯಾರೇ ಬರಲಿ ಅವರಿಗೆ ನಿಯತ್ತನ್ನು ತೋರುವುದು ಆತನ ಸ್ವಭಾವ. ಅದೇ ರೀತಿ ‘ಕೆಜಿಎಫ್’ನಲ್ಲಿ (KGF Movie) ಅಯ್ಯಪ್ಪ ಅವರು ಮಾಡಿದ ಪಾತ್ರ ಹೈಲೈಟ್ ಆಗಿದೆ. ಅವರು ವಾನರನಾಗಿ ಕಾಣಿಸಿಕೊಂಡಿದ್ದಾರೆ. ಯಾರು ಅಧಿಕಾರದಲ್ಲಿರುತ್ತಾರೋ ಅವರಿಗೆ ನಿಯತ್ತು ತೋರೋದು ಈ ವಾನರನ ಸ್ವಭಾವ. ಗರುಡ ಇದ್ದಾಗ ಆತನ ಪರವಾಗಿ ಕೆಲಸ ಮಾಡುತ್ತಿದ್ದ ವಾನರ, ರಾಕಿ ಬಂದಮೇಲೆ ಆತನಿಗೆ ನಿಯತ್ತು ತೋರಿದ್ದ. ಈ ಬಗ್ಗೆ ಅಯ್ಯಪ್ಪ ಅವರ ಸಹೋದರ ಸಾಯಿ ಕುಮಾರ್ ಮಾತನಾಡಿದ್ದಾರೆ. ‘ಅವತಾರ ಪುರುಷ’ ಸಿನಿಮಾದಲ್ಲಿ ಸಾಯಿಕುಮಾರ್ (Saikumar) ನಟಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಸಾಯಿ ಕುಮಾರ್ ಅವರು ಈ ಮಾತನ್ನು ಹೇಳಿದ್ದಾರೆ.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Ashika Ranganath: ‘ಅವತಾರ ಪುರುಷ’ ಬೆಡಗಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ಆಲ್ಬಂ
Meghana Raj Birthday: ಮೇಘನಾ ರಾಜ್ಗೆ ಜನ್ಮದಿನದ ಸಂಭ್ರಮ; ಪತಿ ಚಿರು ಜತೆ ವಯಸ್ಸಿನ ಅಂತರ ಎಷ್ಟಿತ್ತು?