ಸಕಲೇಶಪುರ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್, ಭಯಾನಕ ವಿಡಿಯೋ ಇಲ್ಲಿದೆ

Updated By: Ganapathi Sharma

Updated on: Apr 14, 2025 | 3:08 PM

ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಕಳೆದ ಕೆಲವು ವರ್ಷಗಳಿಂದ ತೀವ್ರಗೊಂಡಿದೆ. ಇದೀಗ ಸಕಲೇಶಪುರದಲ್ಲಿ ಜೀಪ್ ರ‍್ಯಾಲಿ ನಡೆಯುತ್ತಿದ್ದ ವೇಳೆ ಒಂಟಿ ಸಲಗವೊಂದು ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಆನೆ ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುತ್ತಿರುವ ರಣಭೀಕರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಹಾಸನ, ಏಪ್ರಿಲ್ 14: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆಯೊಂದು ವ್ಯಕ್ತಿಯೊಬ್ಬರ ಮೇಲೆ ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದ ಘಟನೆಗೆ ಹಾಸನ ಜಿಲ್ಳೆ ಸಕಲೇಶಪುರ ತಾಲ್ಲೂಕಿನ ಬೆಳ್ಳೂರು ಗ್ರಾಮ ಸಾಕ್ಷಿಯಾಗಿದೆ. ಕೇರಳ ಮೂಲದ ರ‍್ಯಾಲಿ ಪ್ರಿಯನ ಮೇಲೆ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ. ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದೆ ಬೆನ್ನಟ್ಟಿ ದಾಳಿ ಮಾಡಿದೆ. ಆ ಬಳಿಕ ಜನರ ಕೂಗಾಟ, ಚೀರಾಟದಿಂದ ಗಾಬರಿಗೊಂಡು ಓಡಿದೆ. ಗಂಬೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 12 ಹಾಗೂ 13 ರಂದು ನಡೆದಿದ್ದ ರ‍್ಯಾಲಿ ವೇಳೆ ಈ ಘಟನೆ ಸಂಭವಿಸಿದೆ. ಕಾಡಾನೆ ದಾಳಿಯ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್​​​ನಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Published on: Apr 14, 2025 03:01 PM