Samsung AI TV: ಸ್ಮಾರ್ಟ್ ಎಐ ಫೀಚರ್ಸ್ ಟಿವಿ ಪರಿಚಯಿಸಿದೆ ಸ್ಯಾಮ್​ಸಂಗ್

Samsung AI TV: ಸ್ಮಾರ್ಟ್ ಎಐ ಫೀಚರ್ಸ್ ಟಿವಿ ಪರಿಚಯಿಸಿದೆ ಸ್ಯಾಮ್​ಸಂಗ್

ಕಿರಣ್​ ಐಜಿ
|

Updated on: Apr 25, 2024 | 7:07 AM

ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್​ಇಡಿ 8ಕೆ, ನಿಯೋ ಕ್ಯೂಎಲ್​ಇಡಿ 4ಕೆ ಮತ್ತು ಓಎಲ್​ಇಡಿ ಟಿವಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ ಪಿಕ್ಚರ್ ಟೆಕ್ನಾಲಜಿ ಮೂಲಕ ಸ್ಯಾಮ್​ಸಂಗ್, ಬಳಕೆದಾರರಿಗೆ ಹೊಸ ಅನುಭವ ಒದಗಿಸಲು ಮುಂದಾಗಿದೆ. ನೂತನ ಸ್ಯಾಮ್​ಸಂಗ್ ಟಿವಿ ಸರಣಿ 55, 65, 75, 85 ಮತ್ತು 98 ಇಂಚಿನ ಡಿಸ್​ಪ್ಲೇ ಸಹಿತ ಗಾತ್ರಗಳಲ್ಲಿ ದೊರೆಯುತ್ತದೆ..

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಖ್ಯಾತಿ ಗಳಿಸಿದೆ. ಸ್ಯಾಮ್​ಸಂಗ್ ಸ್ಮಾರ್ಟ್ ಟಿವಿಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಬಾರಿ ಸ್ಯಾಮ್​ಸಂಗ್, ಮೊದಲ ಬಾರಿಗೆ ಎಐ ಫೀಚರ್ಸ್ ಸಹಿತ ಸ್ಮಾರ್ಟ್ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸ್ಯಾಮ್​ಸಂಗ್ ನೂತನ 2024 ಸರಣಿಯಲ್ಲಿ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್​ಇಡಿ 8ಕೆ, ನಿಯೋ ಕ್ಯೂಎಲ್​ಇಡಿ 4ಕೆ ಮತ್ತು ಓಎಲ್​ಇಡಿ ಟಿವಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ ಪಿಕ್ಚರ್ ಟೆಕ್ನಾಲಜಿ ಮೂಲಕ ಸ್ಯಾಮ್​ಸಂಗ್, ಬಳಕೆದಾರರಿಗೆ ಹೊಸ ಅನುಭವ ಒದಗಿಸಲು ಮುಂದಾಗಿದೆ. ನೂತನ ಸ್ಯಾಮ್​ಸಂಗ್ ಟಿವಿ ಸರಣಿ 55, 65, 75, 85 ಮತ್ತು 98 ಇಂಚಿನ ಡಿಸ್​ಪ್ಲೇ ಸಹಿತ ಗಾತ್ರಗಳಲ್ಲಿ ದೊರೆಯುತ್ತದೆ. ನೂತನ ಸರಣಿ ಟಿವಿಗಳ ದರ ₹1,39,990ರಿಂದ ಆರಂಭವಾಗುತ್ತದೆ.