ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಸಂಗೀತಾ ಶೃಂಗೇರಿ ಒಟ್ಟಾಗಿ ಕಾಣಿಸಿಕೊಂಡ ದಾಖಲೆಯೇ ಇಲ್ಲ ಎಂದರೂ ತಪ್ಪಾಗಲಾರದು. ಇವರು ಬಿಗ್ ಬಾಸ್ ಮುಗಿದ ಬಳಿಕ ದೂರವೇ ಇದ್ದರು. ಕೊನೆಗೂ ಇವರು ಒಂದಾಗಿದ್ದಾರೆ. ಇವರನ್ನು ನೋಡಿ ಎಲ್ಲರಿಗೂ ಖುಷಿ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಸಾಕಷ್ಟು ಕಿರಿಕ್ಗಳು ಆದವು. ನಮ್ರತಾ ಉತ್ತರ ಆದರೆ, ಸಂಗೀತಾ ದಕ್ಷಿಣ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಈಗ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇವರ ಜೊತೆ ಕಾರ್ತಿಕ್ ಕೂಡ ಇದ್ದರು. ಆ ವಿಡಿಯೋ ಕೂಡ ವೈರಲ್ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

