ಒಂದೇ ಒಂದು ಫೋಟೋದಿಂದ ರಮ್ಯಾ ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಿದೆ ಹತ್ತು ಹಲವು ಪ್ರಶ್ನೆ

| Updated By: ಮದನ್​ ಕುಮಾರ್​

Updated on: May 09, 2022 | 9:30 AM

Ramya Viral Photo: ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಶೀಘ್ರದಲ್ಲೇ ರಮ್ಯಾ ಏನಾದರೂ ಗುಡ್ ನ್ಯೂಸ್​​ ನೀಡಬಹುದೇ ಎಂಬ ಗುಮಾನಿ ವ್ಯಕ್ತವಾಗಿದೆ.

ಸ್ಯಾಂಡಲ್​ವುಡ್​ನ ಖ್ಯಾತ ನಟಿ ರಮ್ಯಾ (Ramya Divya Spandana) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೂ ಅವರು ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ರಾಜಕೀಯದ ಸಲುವಾಗಿ ನಟನೆಯಿಂದ ಅವರು ಬ್ರೇಕ್​ ಪಡೆದುಕೊಂಡಿದ್ದರು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಕಡಿದುಕೊಂಡಿಲ್ಲ. ಈಗಲೂ ಅನೇಕ ಸಿನಿಮಾಗಳ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ ಇರುತ್ತಾರೆ. ರಮ್ಯಾ (Ramya) ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ. ಈ ನಡುವೆ ರಮ್ಯಾ ಅವರ ಒಂದು ಫೋಟೋ (Ramya Photo) ವೈರಲ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿವೆ. ಶೀಘ್ರದಲ್ಲೇ ರಮ್ಯಾ ಅವರು ಏನಾದರೂ ಗುಡ್​ ನ್ಯೂಸ್​ ನೀಡುತ್ತಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: May 09, 2022 09:30 AM