ಅಚ್ಚರಿಯ ರೀತಿಯಲ್ಲಿ ಗೆದ್ದ ಕಾರ್ತಿಕ್​ ಮಹೇಶ್​ ಬಗ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ

|

Updated on: Jan 31, 2024 | 7:33 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಗೆಲ್ಲಬಹುದು ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಆಗಿದ್ದೇ ಬೇರೆ. ಕಾರ್ತಿಕ್​ ಮಹೇಶ್​ ಹಾಗೂ ಡ್ರೋನ್​ ಪ್ರತಾಪ್​ ಟಾಪ್​ 2 ಸ್ಥಾನ ತಲುಪಿದರು. ಸಂಗೀತಾ 3ನೇ ರನ್ನರ್​ ಅಪ್​ ಆದರು. ಕಾರ್ತಿಕ್​ ಬಿಗ್​ ಬಾಸ್​ ಟ್ರೋಫಿ ಗೆದ್ದರು. ಈ ವಿಚಾರದ ಬಗ್ಗೆ ಸಂಗೀತಾ ಶೃಂಗೇರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಕಾರ್ತಿಕ್​ ಮಹೇಶ್ (Karthik Mahesh) ಅವರಿಗೆ ಹೆಚ್ಚು ವೋಟ್​ ಬಂತು. ಹಾಗಾಗಿ ಅವರು ಗೆದ್ದರು. ಮನೆಯೊಳಗೆ ಇದ್ದಾಗ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಹೊರಗಡೆ ಜನರು ಯಾರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುದು ಗೊತ್ತಾದರೆ ನಾವು ನಿರ್ಧಾರ ಮಾಡಬಹುದು. ಆದರೆ ಮನೆಯೊಳಗೆ ಕಿತ್ತಾಡವಾಗ ನಮಗೆ ಏನೂ ಅರ್ಥವಾಗುವುದಿಲ್ಲ. ವೈಯಕ್ತಿಕ ದೃಷ್ಟಿಕೋನ ಅಂತ ಬಂದಾಗ ಇವರು ಗೆಲ್ಲಬಾರದು ಅಂತ ಹೇಳಬಹುದು. ಜನರ ಅಭಿಪ್ರಾಯವನ್ನು ಬದಲಾಯಿಸೋಕೆ ಆಗಲ್ಲ. ಜನರ ಅಭಿಪ್ರಾಯದಿಂದ ಕಾರ್ತಿಕ್​ ಗೆದ್ದಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕು’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ. ಬಿಗ್​ ಬಾಸ್​ ಫಿನಾಲೆಯಲ್ಲಿ ಸಂಗೀತಾ ಗೆಲ್ಲಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಕೊನೇ ವಾರದಲ್ಲಿ ಎಲ್ಲವೂ ತಲೆಕೆಳಗಾಯಿತು. ಅಚ್ಚರಿಯ ರೀತಿಯಲ್ಲಿ ಕಾರ್ತಿಕ್​ ಮಹೇಶ್​ ಮತ್ತು ಡ್ರೋನ್​ ಪ್ರತಾಪ್​ ಅವರು ಟಾಪ್​ 2 ಸ್ಥಾನಕ್ಕೆ ಬಂದರು. ಅಂತಿಮವಾಗಿ ಕಾರ್ತಿಕ್​ ಅವರಿಗೆ ಬಿಗ್​ ಬಾಸ್​ (BBK 10) ಟ್ರೋಫಿ ಸಿಕ್ಕಿತು. ಇದರ ಕುರಿತು ಸಂಗೀತಾ ಶೃಂಗೇರಿ ಅವರು ‘ಟಿವಿ9’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ