AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Winner: ‘ನಾಳೆ ಕಾರ್ತಿಕ್​ ಸಿಕ್ಕರೆ ಹಾಯ್​ ಹೇಳ್ತೀನಿ’: ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಸ್ನೇಹ ಮುಂದುವರಿಸಲು ಕಾರ್ತಿಕ್​ ಹಲವು ಬಾರಿ ಪ್ರಯತ್ನಿಸಿದರೂ ಕೂಡ ಅದಕ್ಕೆ ಸಂಗೀತಾ ಸಿದ್ಧವಿರಲಿಲ್ಲ. ಆದರೆ ಈಗ ಮತ್ತೆ ಕಾರ್ತಿಕ್​ ಅವರನ್ನು ಮಾತನಾಡಿಸುವುದಾಗಿ ಸಂಗೀತಾ ಹೇಳಿದ್ದಾರೆ. ‘ಟಿವಿ9’ ನಡೆಸಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

Bigg Boss Winner: ‘ನಾಳೆ ಕಾರ್ತಿಕ್​ ಸಿಕ್ಕರೆ ಹಾಯ್​ ಹೇಳ್ತೀನಿ’: ಸಂಗೀತಾ ಶೃಂಗೇರಿ
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ
ಮದನ್​ ಕುಮಾರ್​
|

Updated on: Jan 31, 2024 | 4:55 PM

Share

ಬಿಗ್​ ಬಾಸ್​ ಟ್ರೋಫಿ ಗೆಲ್ಲಬೇಕು ಎಂದು ಸಂಗೀತಾ ಶೃಂಗೇರಿ ಆಸೆಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಾರ್ತಿಕ್​ ಮಹೇಶ್​ ಅವರು ಬಿಸ್​ ಬಾಸ್​ (Bigg Boss Kannada) ಟ್ರೋಫಿ ಪಡೆದುಕೊಂಡಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ನಡುವೆ ವೈಮನಸ್ಸು ಮೂಡಿತ್ತು. ಇಬ್ಬರ ಸ್ನೇಹದಲ್ಲಿ ಬಿರುಕು ಉಂಟಾಗಿತ್ತು. ಬಿಗ್​ ಬಾಸ್​ ಮನೆಯಿಂದ ಹೊರಬಂದ ಬಳಿಕ ಅವರು ಮತ್ತೆ ಫ್ರೆಂಡ್ಸ್​ ಆಗುತ್ತಾರೋ ಅಥವಾ ಇಲ್ಲವೋ ಎಂಬ ಕುತೂಹಲ ಇದೆ. ಆ ಕುರಿತು ಸಂಗೀತಾ ಶೃಂಗೇರಿ (Sangeetha Sringeri) ಮಾತನಾಡಿದ್ದಾರೆ. ಬಿಗ್​ ಬಾಸ್​ ಆಟವೇ ಬೇರೆ, ನಿಜವಾದ ಜೀವನವೇ ಬೇರೆ ಎಂದು ಅವರು ಹೇಳಿದ್ದಾರೆ.

‘ಆ ಮನೆಯಲ್ಲಿ ನಡೆದ ಮನಸ್ತಾಪ, ಜಗಳ, ಸ್ನೇಹ, ಮೋಸ ಎಲ್ಲವೂ ಆಟಕ್ಕಾಗಿ. ಎಲ್ಲರೂ ಬಂದಿದ್ದು ಗೆಲ್ಲುವುದಕ್ಕಾಗಿ. ಆಟದಲ್ಲಿ ಒರಟು ಮಾತು, ಚುಚ್ಚುಮಾತು ಸಹಜ. ವೈಯಕ್ತಿಕ ಕಾರಣದಿಂದ ಯಾರೂ ಅದನ್ನೆಲ್ಲ ಮಾಡಿಲ್ಲ. ಮುಖ್ಯದ್ವಾರದಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಗೇಮ್​ ಮುಕ್ತಾಯ ಆಗುತ್ತದೆ. ಅಲ್ಲಿಂದ ನಮ್ಮ ರಿಯಲ್​ ಲೈಫ್​ ಶುರುವಾಗುತ್ತದೆ. ಇಲ್ಲಿಯೂ ಅದನ್ನೇ ಮುಂದುವರಿಸಿದರೆ ಜೀವನಕ್ಕೆ ಅರ್ಥ ಇರುವುದಿಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತಾ ಜತೆ ಸ್ನೇಹ ಮುಂದುವರಿಯುತ್ತಾ? ನಿರ್ಧಾರ ತಿಳಿಸಿದ ಬಿಗ್​ ಬಾಸ್​ ವಿನ್ನರ್​ ಕಾರ್ತಿಕ್​

‘ಇಲ್ಲಿ ಯಾವ ಗೇಮ್​ ಇದೆ ಗುರು? ಕಪ್​ ಗೆದ್ದವರು ಗೆದ್ದಾಗಿದೆ. ಈಗ ನಾವು ನಮ್ಮ ಜೀವನವನ್ನು ನಡೆಸಬೇಕು. ಈಗಿನಿಂದ ನಮ್ಮ ಮನುಷ್ಯತ್ವ ತೋರಿಸುತ್ತದೆ. ನಾವು ರಿಯಲ್​ ಆಗಿ ಹೇಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಅಲ್ಲಿರುವ ಮನಸ್ತಾಪವನ್ನು ನಾನು ಇಲ್ಲಿ ಯಾಕೆ ಮುಂದುವರಿಸಬೇಕು? ನಾಳೆ ಸಿಗುತ್ತಾರೆ ಎಂದರೆ ಖಂಡಿತವಾಗಿಯೂ ಹಾಯ್​ ಹೇಳುತ್ತೇನೆ. ಅದೇ ಜೀವನ’ ಎಂದು ಸಂಗೀತಾ ಶೃಂಗೇರಿ ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ.

ಸಂಗೀತಾ ಶೃಂಗೇರಿ ಸಂದರ್ಶನದ ವಿಡಿಯೋ:

‘ಇದನ್ನು ನಾನು ನನ್ನ ಅಭಿಮಾನಿಗಳಿಗೂ ಹೇಳಲು ಇಷ್ಟಪಡುತ್ತೇನೆ. ಅಲ್ಲಿ ನಡೆದ ಜಗಳಗಳು ಆ ಮನೆಯಿಂದ ಹೊರಗೆ ಕಾಲಿಟ್ಟ ಬಳಿಕ ಮುಗಿದವು. ಗೇಮ್​ ಮುಕ್ತಾಯ ಆಯಿತು. ಕಬಡ್ಡಿ ಆಟದಲ್ಲಿ ಔಟ್​ ಆಗಿದ್ದಕ್ಕೆ ಜೀವನಪರ್ಯಂತ ಮಾತನಾಡಲ್ಲ ಅಂತ ಹೇಳಿದರೆ ಹೇಗೆ ಸರಿಯಾಗುತ್ತದೆ? ಅದು ಆಟ. ಅದರಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ವೀಕ್ಷಕರಾಗಿ ನಾವು ಬೆಂಬಲ ನೀಡಬೇಕು, ಆ ಕ್ಷಣವನ್ನು ಎಂಜಾಯ್ ಮಾಡಬೇಕು. ಗೇಮ್ ಮುಗಿದ ಬಳಿಕ ಅದನ್ನು ಆಟ ಅಂತ ಒಪ್ಪಿಕೊಂಡು, ಈಗ ಪಾರ್ಟಿ ಮಾಡೋಣ ಅಂತ ಬರಬೇಕು’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ