ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ

ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ

ಮಂಜುನಾಥ ಸಿ.
|

Updated on: Nov 29, 2023 | 10:42 PM

Pooja Gandhi Marriage: ನಟಿ ಪೂಜಾ ಗಾಂಧಿ ಉದ್ಯಮಿ ವಿಜಯ್ ಘೋರ್ಪಡೆ ಅವರೊಟ್ಟಿಗೆ ವಿವಾಹವಾಗಿದ್ದಾರೆ. ಮದುವೆಗೆ ಆಗಮಿಸಿದ್ದ ನಟಿ ಸಂಜನಾ ಗಲ್ರಾನಿ, ಪೂಜಾ ಜೊತೆಗೆ ಮಾಡಿಕೊಂಡಿದ್ದ ಜಗಳವನ್ನು ನೆನಪು ಮಾಡಿಕೊಂಡಿದ್ದಾರೆ.

ನಟಿ ಪೂಜಾ ಗಾಂಧಿ (Pooja Gandhi) ಇಂದು (ನವೆಂಬರ್ 29) ಯಲಹಂಕದಲ್ಲಿ ಉದ್ಯಮಿ ವಿಜಯ್ ಘೋರ್ಪಡೆ ಅವರೊಟ್ಟಿಗೆ ಮಂತ್ರ ಮಾಂಗಲ್ಯ ವಿಧಾನದಲ್ಲಿ ವಿವಾಹವಾಗಿದ್ದಾರೆ. ವಿವಾಹ ಕಾರ್ಯಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಮದುವೆಗೆ ಆಗಮಿಸಿದ್ದ ನಟಿ ಸಂಜನಾ ಗಲ್ರಾನಿ ಪೂಜಾ ಗಾಂಧಿ ತಮಗೆ ಪರಿಚಯವಾಗಿದ್ದು ಹೇಗೆ ಎಂಬುದನ್ನು ಮಾತನಾಡುತ್ತಾ, ನಾವಿಬ್ಬರೂ ‘ದಂಡುಪಾಳ್ಯ’, ‘ದಂಡುಪಾಳ್ಯ 2’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆಗ ನಮ್ಮಿಬ್ಬರಿಗೂ ತುಸು ಜಗಳವಾಗಿತ್ತು, ಅದು ಕೋಳಿ ಜಗಳ ಅಷ್ಟೆ. ಇಬ್ಬರು ಜಡೆಗಳನ್ನು ಒಂದೆಡೆ ಹಾಕಿದಾಗ ಆಗುವ ಸಾಮಾನ್ಯ ಜಗಳ ಅದು. ಆದರೆ ನಮ್ಮಿಬ್ಬರ ಮನಸ್ಸಿನಲ್ಲಿ ದ್ವೇಷ ಇಲ್ಲ. ಪೂಜಾ ಗಾಂಧಿಗೆ ಒಳ್ಳೆಯದಾಗಬೇಕು, ನನ್ನಂತೆ ಅವರಿಗೂ ಮುದ್ದಾದ ಮಗುವಾಗಬೇಕು ಎಂದು ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ