‘ದೊಡ್ಡಪ್ಪನ ಮಾತಿಗೆ ಕಟ್ಟುಬಿದ್ದು ತಾಳಿ ಕಟ್ಟಿದೆ’; ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ವರ್ತೂರು ಸಂತೋಷ್ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆ ಆಗಿದೆ. ಬಿಗ್ ಬಾಸ್ಗೆ ರೀ ಎಂಟ್ರಿ ಪಡೆಯುತ್ತಿದ್ದಂತೆ ಸಂತೋಷ್ ವಿವಾಹ ವಿಚಾರ ಮುನ್ನೆಲೆಗೆ ಬಂತು. ಈ ಬಗ್ಗೆ ಸಂತೋಷ್ ಅವರು ಓಪನ್ ಆಗಿ ಮಾತನಾಡಿದ್ದಾರೆ.
‘ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ (Varthur Santosh) ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಮೇಲೆ ಹುಲಿ ಉಗುರು ಹೊಂದಿರುವ ಆರೋಪ ಬಂತು. ಅವರನ್ನು ಬಂಧಿಸಲಾಯಿತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದಾರೆ. ಬಿಗ್ ಬಾಸ್ಗೆ ರೀ ಎಂಟ್ರಿ ಪಡೆಯುತ್ತಿದ್ದಂತೆ ಸಂತೋಷ್ ಮದುವೆ ಆಗಿದ್ದ ವಿಚಾರ ಚರ್ಚೆಗೆ ಬಂತು. ದೊಡ್ಮನೆಯಲ್ಲಿ ಸಂತೋಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆ ಎಂದೆ. ಅದರಂತೆ ನಡೆದುಕೊಂಡೆ. ಮದುವೆ ಆದ ಹುಡುಗಿ ನನ್ನ ತಾಯಿಯನ್ನು ಕಡೆಗಣಿಸಲು ಆರಂಭಿಸಿದರು. ಹೀಗಾಗಿ, ನಾನು ಪತ್ನಿಯಿಂದ ದೂರ ಆದೆ’ ಎಂದಿದ್ದಾರೆ ಸಂತೋಷ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 30, 2023 08:43 AM
Latest Videos