ಮಂಡ್ಯ: ಕಿಚ್ಚು ಹಾಯ್ದು ಎಡವಿ ಬಿದ್ದ ರೈತ, ತುಳಿಯದೇ ಆತನ ಮೇಲೆ ಜಿಗಿದು ಹೋದ ಎತ್ತು

Edited By:

Updated on: Jan 16, 2024 | 9:50 AM

ರಾಜ್ಯಾದ್ಯಂತ ಸೋಮವಾರ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಯಿತು. ಸಂಕ್ರಮಣದ ನಿಮಿತ್ತ ಕರ್ನಾಟಕದ ಹಲವು ಗ್ರಾಮಗಳಲ್ಲಿ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆ ನಡೆಯಿತು. ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆ ನಡೆಯಿತು.

ಮಂಡ್ಯ, ಜನವರಿ 16: ರಾಜ್ಯಾದ್ಯಂತ ಸೋಮವಾರ ಮಕರ ಸಂಕ್ರಾಂತಿಯನ್ನು (Sankaranti) ಸಡಗರದಿಂದ ಆಚರಿಸಲಾಯಿತು. ಸಂಕ್ರಮಣದ ನಿಮಿತ್ತ ಕರ್ನಾಟಕದ ಹಲವು ಗ್ರಾಮಗಳಲ್ಲಿ ಎತ್ತುಗಳ ಕಿಚ್ಚು ಹಾಯುವ ಆಚರಣೆ ನಡೆಯಿತು. ಇದೇ ರೀತಿಯ ಆಚರಣೆ ಮಂಡ್ಯ (Mandya) ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ನಡೆದಿದೆ. ಬಿದರಕೋಟೆ ಯುವ ರೈತ ಮಹೇಶ್ ಹಬ್ಬದ ನಿಮಿತ್ತ ದ್ಯಾಪಸಂದ್ರ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ದ್ಯಾಪಸಂದ್ರದಲ್ಲಿ ನಡೆದ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆಯಲ್ಲಿ ಮಹೇಶ್​ ಕೂಡ ಭಾಗಿಯಾಗಿದ್ದರು. ರೈತ ಮಹೇಶ್ ಎತ್ತನ್ನು ಹಿಡಿದುಕೊಂಡು ಕಿಚ್ಚು ಹಾಯ್ದಿದ್ದಾರೆ. ಕಿಚ್ಚು ಹಾಯ್ದ ಬಳಿಕ ಮಹೇಶ್​ ಎಡವಿ ಬಿದ್ದಿದ್ದಾರೆ. ಎತ್ತು ಮುಂದೆ ಓಡಿ ಹೋಗಿದೆ. ಬಿದ್ದ ರೈತ ಮಹೇಶ್​ ಅವರ ಹಿಂದೆಯೇ ಬರುತ್ತಿದ್ದ ಮತ್ತೊಂದು ಎತ್ತು, ಆತನನ್ನು ತುಳಿಯದೆ ಜಿಗಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮನುಷ್ಯ ಎಡವಿದರೂ ಪ್ರಾಣಿ ಎಡುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

Published on: Jan 16, 2024 09:48 AM
Follow Us
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More