ನೆನಪಿನ ಬುತ್ತಿ ಬಿಚ್ಚಿಡುವಾಗ ಅಳುತ್ತಲೇ ಮಾತು ಅರ್ಧಕ್ಕೆ ನಿಲ್ಲಿಸಿದ ಸಂತೋಷ್ ಆನಂದ್ರಾಮ್
ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯೋಕೆ ಅಭಿಮಾನಿಗಳು ತಂಡೋಪ ತಂಡವಾಗಿ ಬರುತ್ತಿದ್ದಾರೆ. ನಗುಮುಖ ಹೊತ್ತು ಎಲ್ಲ ಕಡೆಗಳಲ್ಲೂ ತಿರುಗಾಡುತ್ತಿದ್ದ ಅವರು ಈಗ ಇಲ್ಲ ಎನ್ನುವ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.
ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ಪುನೀತ್ ರಾಜ್ಕುಮಾರ್ ನಡುವಿನ ಒಡನಾಟ ಬಹಳ ಹಳೆಯದು. ಇಬ್ಬರೂ ಎರಡು ಸಿನಿಮಾಗಳನ್ನು ಮಾಡಿದ್ದರು. ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದರು. ಆದರೆ, ಅದಕ್ಕೂ ಮೊದಲೇ ಪುನೀತ್ರಾಜ್ಕುಮಾರ್ ನಿಧನಹೊಂದಿದ್ದಾರೆ. ಇದು ಸಂತೋಷ್ ಆನಂದ್ರಾಮ್ಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಮಾತನಾಡುವಾಗ ಅವರು ಕಣ್ಣೀರು ಹಾಕಿದರು.
ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯೋಕೆ ಅಭಿಮಾನಿಗಳು ತಂಡೋಪ ತಂಡವಾಗಿ ಬರುತ್ತಿದ್ದಾರೆ. ನಗುಮುಖ ಹೊತ್ತು ಎಲ್ಲ ಕಡೆಗಳಲ್ಲೂ ತಿರುಗಾಡುತ್ತಿದ್ದ ಅವರು ಈಗ ಇಲ್ಲ ಎನ್ನುವ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸಂತೋಷ್ ಕೂಡ ಇಂದು (ಅಕ್ಟೋಬರ್ 30) ರಾತ್ರಿ ಆಗಮಿಸಿದ್ದರು.
ಇದನ್ನೂ ಓದಿ: ‘ತುಂಬ ಸಂಕಟ ಆಗ್ತಿದೆ, ಕೈ ನಡುಗುತ್ತಿದೆ’; ಪುನೀತ್ ಬಗ್ಗೆ ಮಾತಾಡುತ್ತ ಮೌನ ತಾಳಿದ ರಚಿತಾ ರಾಮ್
ಸಾಯುವ ಕೆಲವೇ ಗಂಟೆಗಳ ಮುನ್ನ ಪುನೀತ್ ರಾಜ್ಕುಮಾರ್ ಮಾತನಾಡಿದ್ದೇನು? ಆಡಿಯೋ ಕ್ಲಿಪ್ ವೈರಲ್
Loading...
Unable to load recommendations.
Follow Us
