Santro Ravi: ಪೊಲೀಸರಿಗೆ ಸವಾಲಾಗಿರುವ ಬ್ಲ್ಯಾಕ್ ಮೇಲರ್ ವಾರದ ಹಿಂದೆ ಉಡುಪಿಯ ಹೆಬ್ರಿಯಲ್ಲಿ ಕಾಣಿಸಿಕೊಂಡಿದ್ದ!
ವಿಷಯ ಬೆಂಗಳೂರು ಪೊಲೀಸರಿಗೆ ಗೊತ್ತಾಗಿದ್ದು ಅವರು ಉಡುಪಿಗೆ ಹೋಗಿ ಸುತ್ತಮುತ್ತಲಿಮ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಉಡುಪಿ: ಯುವತಿಯರನ್ನು ಬಳಸಿಕೊಂಡು ರಾಜಕಾರಣಿ ಮತ್ತು ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ ಕೋಟ್ಯಾಂತರ ಅಸ್ತಿ ಮಾಡಿಕೊಂಡಿರುವ ಪಿಂಪ್ ಸ್ಯಾಂಟ್ರೋ ರವಿ (Santo Ravi) ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ರವಿಯ ಫಲಾನುಭವಿಗಳೇ (beneficiaries) ಅವನನ್ನು ಬಚ್ಚಿಟ್ಟಿದ್ದಾರೆಯೇ ಎಂಬ ಪ್ರಶ್ನೆಗಳೂ ಏಳುತ್ತಿವೆ. ಅವನ ಕುರಿತ ಲೇಟೆಸ್ಟ್ ಮಾಹಿತಿಯೆಂದರೆ ಕೆಲ ದಿನಗಳ ಹಿಂದೆ ಉಡುಪಿಯ (Udupi) ಹೆಬ್ರಿಯಲ್ಲಿ ಕಾಣಿಸಿಕೊಂಡಿದ್ದನಂತೆ ಮತ್ತು ಅಲ್ಲಿನ ಬೀಡಾ ಅಂಗಡಿಯ ಮಾಲೀಕನೊಬ್ಬನ ಫೋನ್ ನಿಂದ ಯಾರಿಗೋ ಕರೆ ಮಾಡಿದ್ದನಂತೆ. ವಿಷಯ ಬೆಂಗಳೂರು ಪೊಲೀಸರಿಗೆ ಗೊತ್ತಾಗಿದ್ದು ಅವರು ಉಡುಪಿಗೆ ಹೋಗಿ ಸುತ್ತಮುತ್ತಲಿಮ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ