Ragini Dwivedi: ಮದುವೆ ಬಗ್ಗೆ ರಾಗಿಣಿ ದ್ವಿವೇದಿಗೆ ಪ್ರಶ್ನೆ; ನೇರವಾಗಿ ಉತ್ತರಿಸಿದ ನಟಿ
ಲಂಡನ್ನಲ್ಲಿ ನಡೆದ ಶೂಟಿಂಗ್ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡರು. ಅದೇ ರೀತಿ ನಟಿ ರಾಗಿಣಿ ಅವರು ಮದುವೆ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಬಾಲಿವುಡ್ಗೆ (Bollywood) ಕಾಲಿಡೋಕೆ ರೆಡಿ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡೋಕೆ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಅವರು ಸಿನಿಮಾ ಬಗ್ಗೆ ಹಾಗೂ ಲಂಡನ್ನಲ್ಲಿ ನಡೆದ ಶೂಟಿಂಗ್ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡರು. ಅದೇ ರೀತಿ ನಟಿ ರಾಗಿಣಿ ಅವರು ಮದುವೆ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ‘ಸದ್ಯ ನನಗೆ ಕೆಲಸ ಖುಷಿ ನೀಡುತ್ತಿದೆ. ಅದರ ಬಗ್ಗೆ ಮಾತ್ರ ಆಲೋಚಿಸುತ್ತಿದ್ದೇನೆ. ಮದುವೆ ಬಗ್ಗೆ ಸದ್ಯಕ್ಕೆ ಆಲೋಚಿಸಿಲ್ಲ’ ಎಂದಿದ್ದಾರೆ ರಾಗಿಣಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

