ನನಗಿಂತ ಸಪ್ತಮಿ ಪಾತ್ರಕ್ಕೆ ಒಳ್ಳೆಯ ಡೈಲಾಗ್ ಇದೆ ಎಂದ ನೀನಾಸಂ ಸತೀಶ್
ಸಪ್ತಮಿ ಗೌಡ ಹಾಗೂ ನೀನಾಸಂ ಸತೀಶ್ ಅವರು ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು ಮತ್ತು ಎಲ್ಲರೂ ಪಾತ್ರದ ಬಗ್ಗೆ ವಿವರಿಸಿದರು. ಈ ವೇಳೆ ನೀನಾಸಂ ಸತೀಶ್ ಒಂದು ವಿಚಾರವನ್ನು ಹೇಳಿದರು.
ನೀನಾಸಂ ಸತೀಶ್ ಹಾಗೂ ಸಪ್ತಮಿ ಗೌಡ (Saptami Gowda) ಅವರು ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ವೇಳೆ ಸಪ್ತಮಿ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ‘ಈ ಪಾತ್ರ ಚೆನ್ನಾಗಿ ಕನೆಕ್ಟ್ ಆಗುತ್ತೆ. ತುಂಬಾನೇ ಪ್ರಬುದ್ಧವಾಗಿ ನಡೆದುಕೊಳ್ಳುವ ಪಾತ್ರ ಇದು. ಎಲ್ಲಾ ಮಹಿಳೆಯರ ಪರವಾಗಿ ನಾನು ಪ್ರಶ್ನೆ ಕೇಳುತ್ತೇನೆ. ಈಗ ಮಹಿಳೆಯರು ಪ್ರಶ್ನೆ ಮಾಡುವ ಪರಿಸ್ಥಿತಿಯಲ್ಲಿದ್ದೇವೆ. ಅಷ್ಟು ಮೀಡಿಯಂಗಳು ನಮಗೆ ಇವೆ. ಸಿನಿಮಾ ನೋಡಿದ ಬಳಿಕ ಪಾತ್ರ ಹಾಗೆಯೇ ಉಳಿದುಕೊಳ್ಳುತ್ತದೆ’ ಎಂದು ಸಪ್ತಮಿ ಹೇಳಿದರು. ಈ ಬಗ್ಗೆ ಮಾತನಾಡಿದ ಸತೀಶ್ ಅವರು, ‘ನನಗಿಂತ ಸಪ್ತಮಿ ಪಾತ್ರಕ್ಕೆ ಒಳ್ಳೆಯ ಡೈಲಾಗ್ ಸಿಕ್ಕಿದೆ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 30, 2025 12:12 PM