ರೋಮ್ಯಾಂಟಿಕ್ ಮೂಡಲ್ಲಿದ್ದ ಗಂಡು ನವಿಲೊಂದು ಹೆಣ್ಣು ನವಿಲನ್ನು ಆಕರ್ಷಿಸಲು ಕುಣಿದಿದ್ದೇ ಕುಣಿದದ್ದು!
ಗರಿಬಿಚ್ಚಿ ಕುಣಿಯುತ್ತಿರುವ ಗಂಡು ನವಿಲಿನ ಸುತ್ತಮುತ್ತ ಹೆಣ್ಣು ನವಿಲೊಂದು ಸುತ್ತಾಡುತ್ತಿರೋದನ್ನು ಗಮನಿಸಬಹುದು. ಬೇಸಿಗೆ ಕಳೆದು ಮಳೆಗಾಲ ಶುರುವಾಗುತ್ತಿದ್ದಂತೆಯೇ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಶರುವಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ಪ್ರಾಣಿಗಳು ಸಶಕ್ತ, ಬಲಶಾಲಿ ಮತ್ತು ಸದೃಢ ಗಂಡುಪ್ರಾಣಿಯನ್ನು ಸಮಾಗಮಕ್ಕೆ ಆರಿಸಿಕೊಳ್ಳುತ್ತವೆ. ಅದಕ್ಕಾಗಿ ಅವು ಕೆಲ ಟೆಸ್ಟ್ಗಳನ್ನೂ ನಡೆಸುತ್ತವೆಂದರೆ ನಿಮಗೆ ಆಶ್ಚರ್ಯವಾಗಬಹುದು.
ಚಿಕ್ಕಮಗಳೂರು, ಜೂನ್ 30: ಗಂಡು ನವಿಲಿನ ನೃತ್ಯ ನೋಡಿದ್ದೀರಾ? ನೋಡಿಲ್ಲವಾದೆ ಇಲ್ಲಿದೆ ವಿಡಿಯೋ; ನೋಡಿ ಆನಂದಿಸಿ. ಜಿಲ್ಲೆಯ ಕಳಸದಲ್ಲಿ ರೋಮ್ಯಾಂಟಿಕ್ ಮೂಡ್ನಲ್ಲಿರುವ ನವಿಲೊಂದು ಮೈಮರೆತು ಕುಣಿಯುವ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ನಮಗೆ ಕಳಿಸಿದ್ದಾರೆ. ಅಂದಹಾಗೆ, ಗಂಡು ನವಿಲು ಗರಿಬಿಚ್ಚಿ ಕುಣಿಯೋದು ಯಾಕೆ ಅಂತ ನಿಮಗೆ ಗೊತ್ತಿರಬಹುದು. ಹೌದು, ಹೆಣ್ಣು ನವಿಲನ್ನು ಆಕರ್ಷಿಸಲು ಮತ್ತು ಸಮಾಗಮಕ್ಕೆ ಆಹ್ವಾನಿಸಲು ಅದು ಕುಣಿಯುತ್ತದೆ. ಅದರ ಕುಣಿತಕ್ಕೆ ಮನಸೋಲುವ ಮತ್ತು ಇಂಗಿತವನ್ನು ಅರ್ಥಮಾಡಿಕೊಳ್ಳುವ ಹೆಣ್ಣು ನವಿಲು ತಮ್ಮ ಒಪ್ಪಿಗೆಯನ್ನು ಸೂಚಿಸಿ ಮುಂದಿನ ಕ್ರಿಯೆಗೆ ಅಣಿಯಾಗುತ್ತದೆ.
ಇದನ್ನೂ ಓದಿ: Swapna Shastra: ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ, ಅಶುಭವೋ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ