ಸರ್ದಾರ್ ವಲ್ಲಭಭಾಯ್ ಪಟೇಲ್ ದೇಶವನ್ನು ಒಗ್ಗೂಡಿಸಿ ಶಕ್ತಿಶಾಲಿ ಮಾಡಿದ ವ್ಯಕ್ತಿ: ಆರ್ ಅಶೋಕ

|

Updated on: Oct 29, 2024 | 11:13 AM

ಸಚಿವ ಜಮೀರ್ ಅಹ್ಮದ್​ರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಅಶೋಕ್, ವಕ್ಫ್ ಜಮೀನು ಬಗ್ಗೆ ಅವನು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಜಮೀನು ಅವನ ತಾತನಿಗೆ ಸೇರಿದ್ದಾ ಇಲ್ಲ ಅರಬ್ ರಾಷ್ಟ್ರಗಳಿಂದ ಬಂದಿದ್ದಾ? ಈ ದೇಶದ ಜಮೀನು ರೈತರಿಗೆ ಸೇರಿದ್ದು ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿ ಬಿಜೆಪಿ ಶಾಸಕರು, ಮುಖಂಡರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಐಕ್ಯತಾ ಓಟವನ್ನು ಮಾಡುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅಶೋಕ್, ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯ ಮೇರೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್​ಭಾಯ್ ಪಟೇಲ್ ಅವರ 150 ಜನ್ಮ ವಾರ್ಷಿಕೋತ್ಸವದ ನಿಮಿತ್ತ ಐಕ್ಯತಾ ಓಟವನ್ನು ಹಮ್ಮಿಕೊಳ್ಳಲಾಗಿದೆ, ಪಟೇಲ್ ಅವರು ಭಾರತ ದೇಶವನ್ನು ಒಗ್ಗೂಡಿಸಿದ ವ್ಯಕ್ತಿ, ಇಂದು ವಿಶ್ವದಲ್ಲಿ ಭಾರತ ಒಂದು ಶಕ್ತಿಶಾಲಿ ರಾಷ್ಟ್ರ ಎಂದು ಗುರುತಿಸಿಕೊಂಡಿರುವುದಕ್ಕೆ ಅವರೇ ಕಾರಣ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಹುಲ್ ಗಾಂಧಿ ಜೊತೆ ಸತೀಶ್ ಸೈಲ್; ಇದು ಕಾಂಗ್ರೆಸ್​ನ ಗುಣ ಎಂದ ಬಿಜೆಪಿ ನಾಯಕ ಆರ್. ಅಶೋಕ್

Published on: Oct 29, 2024 10:17 AM