ಶನಿವಾರವೇ ನಡೆಯಲಿದೆ ಸರೆಗಮಪ ಫಿನಾಲೆ; ಮೊದಲೇ ನೋಡಲು ಹೀಗೆ ಮಾಡಿ

Updated on: Jun 03, 2025 | 11:52 AM

ಶನಿವಾರ ‘ಸರಿಗಮಪ’ ಫಿನಾಲೆ ನಡೆಯಲಿದೆ. ಇದರ ವೀಕ್ಷಣೆಗೆ ಫ್ಯಾನ್ಸ್ ಕಾದಿದ್ದಾರೆ. ಸದ್ಯ 6 ಮಂದಿ ಫಿನಾಲೆ ಹಂತ ತಲುಪಿದ್ದಾರೆ. ಶನಿವಾರ (ಜೂನ್ 3) ಫಿನಾಲೆ ನಡೆಯಲಿದೆ. ಮೊದಲೇ ಫಿನಾಲೆ ನೋಡಲು ಅವಕಾಶ ಇದೆ. ಆ ಬಗ್ಗೆ  ಜೀ ಕನ್ನಡದವರ ಕಡೆಯಿಂದ ಮಾಹಿತಿ ಸಿಕ್ಕಿದೆ.

‘ಸರಿಗಮಪ’ (Saregamapa) ವೇದಿಕೆ ಫಿನಾಲೆಗೆ ಸಜ್ಜಾಗಿದೆ. ಇದು 21ನೇ ಸೀಸನ್ ಆಗಿದ್ದು, ಆರು ಸ್ಪರ್ಧಿಗಳು ಫಿನಾಲೆ ಹಂತ ತಲುಪಿದ್ದಾರೆ.  ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಫಿನಾಲೆಯಲ್ಲಿ ಇರೋ ಸ್ಪರ್ಧಿಗಳು. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಜಡ್ಜ್​ಗಳಾಗಿದ್ದಾರೆ. ಶನಿವಾರ (ಜೂನ್ 7) ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ನೀವು ಫಿನಾಲೆ ವೀಕ್ಷಿಸಬಹುದು. ಆದರೆ, ಜೀ5 ಚಂದಾದಾರಾಗಿದ್ದರೆ ನೀವು ಸಂಜೆ 5 ಗಂಟೆಯಿಂದಲೇ ಫಿನಾಲೆ ನೋಡಬಹುದು ಮತ್ತು ಸ್ಪರ್ಧಿಗಳಿಗಳಿಗೆ ವೋಟ್ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More