‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ

Updated on: May 29, 2025 | 11:48 AM

‘ಸರಿಗಮಪ’ ವೇದಿಕೆ ಫಿನಾಲೆಗೆ ರೆಡಿ ಆಗುತ್ತಿದೆ. ಅದಕ್ಕೂ ಮೊದಲು ವಿಶೇಷ ಕಾರ್ಯಕ್ರಮ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಯಾವುದು ಆ ಕಾರ್ಯಕ್ರಮ? ಅದುವೇ ಪ್ರೀ-ಫಿನಾಲೆ. ಫಿನಾಲೆಗೂ ಮೊದಲು ಒಂದಷ್ಟು ಫಣ್ ಆ್ಯಕ್ಟೀವಿಟಿ ಮಾಡಲಾಗಿದೆ. ಆ ಬಗ್ಗೆ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.

ಸಾಮಾನ್ಯವಾಗಿ ಸೆಮಿ ಫೈನಲ್ ನಡೆದ ಬಳಿಕ ಫಿನಾಲೆ ನಡೆಯುತ್ತದೆ. ಆದರೆ, ಜೀ ಕನ್ನಡದ ‘ಸರಿಗಮಪ’ (Saregamapa) ವೇದಿಕೆ ಮೇಲೆ ಸೆಮಿ ಫೈನಲ್ ಮುಗಿದ ಬಳಿಕ ಪ್ರಿ-ಫಿನಾಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫಿನಾಲೆ ಏರಿದ ಸ್ಪರ್ಧಿಗಳ ಜೊತೆ ಜಡ್ಜ್​ಗಳು ಒಂದಷ್ಟು ಸಮಯ ಕಳೆದಿದ್ದಾರೆ. ಈ ಶನಿವಾರ ಹಾಗೂ ಭಾನುವಾರ ಎಪಿಸೋಡ್ ಫನ್ ಆಗಿರಲಿದೆ ಎಂಬುದು ಸ್ಪಷ್ಟವಾಗಿದೆ. ಐಪಿಎಲ್ ಮುಗಿದ ಬಳಿಕ ಅಂದರೆ 7 ಹಾಗೂ 8ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More