ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ

|

Updated on: Jan 15, 2025 | 2:20 PM

Sarigama Viji: ಕನ್ನಡ ಚಿತ್ರರಂಗದ ಜನಪ್ರಿಯ ಹಿರಿಯ ನಟ ಸರಿಗಮ ವಿಜಿ ನಿಧನ ಹೊಂದಿದ್ದಾರೆ. ಆಸ್ಪತ್ರೆ ಬಳಿ ಅವರ ಕುಟುಂಬಸ್ಥರು, ಆಪ್ತರು ಆಗಮಿಸಿದ್ದು, ವಿಜಿ ಅವರ ಅಂತಿಮ ದರ್ಶನ, ಅಂತಿಮ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ವಿಜಿ ಅವರ ಅಂತಿಮ ದರ್ಶನದ ವ್ಯವಸ್ಥೆಯ ಬಗ್ಗೆ ಅವರ ಸಂಬಂಧಿ, ನಿರ್ಮಾಪಕರೂ ಆಗಿರುವ ಅಶೋಕ್ ಮಾಹಿತಿ ನೀಡಿದ್ದಾರೆ.

ಹಿರಿಯ ನಟ ಸರಿಗಮ ವಿಜಿ ಅವರು ಇಂದು (ಜನವರಿ 15) ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಯಶವಂತಪುರ ಮಣಿಪಾಲ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ವಿಜಿ ಅವರ ಬಂಧುಗಳು, ಸಂಬಂಧಿಗಳು, ಸ್ನೇಹಿತರು ಆಸ್ಪತ್ರೆಗೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ವಿಜಿ ಅವರ ಸಂಬಂಧಿ, ಸಿನಿಮಾ ನಿರ್ಮಾಪಕರೂ ಆಗಿರುವ ಅಶೋಕ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ವಿಜಿ ಅವರೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಂತಿಮ ದರ್ಶನದ ವ್ಯವಸ್ಥೆ, ಅಂತಿಮ ಕಾರ್ಯ ಇನ್ನಿತರೆ ಮಾಹಿತಿಗಳನ್ನು ಸಹ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 15, 2025 02:19 PM