ಲಕ್ಷ್ಮಿ ಹೆಬ್ಬಾಳ್ಕರ್ ಮಾತಾಡಿಸಲು ಪತ್ನಿ ಡಾ ಹಿತಾಳೊಂದಿಗೆ ಆಸ್ಪತ್ರೆಗೆ ಬಂದ ಮಗ ಮೃಣಾಲ್
ಸೋಮವಾರ ರಾತ್ರಿ ಬೆಂಗಳೂರಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರೊಂದಿಗೆ ತಡರಾತ್ರಿ ಬೆಂಗಳೂರಿಂದ ಹೊರಟು ಬೆಳಗಾವಿಗೆ ಬರುತ್ತಿದ್ದಾಗ ಅವರ ಕಾರು ಬೆಳಗ್ಗೆ ಸುಮಾರು 6 ಗಂಟೆಗೆ ಕಿತ್ತೂರಿನ ಅಂಬಡಗಟ್ಟಿ ಎಂಬಲ್ಲಿ ಅಪಘಾತಕ್ಕೀಡಾಗಿತ್ತು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಬೆನ್ನು ಮೂಳೆ ಮುರಿತದಿಂದ ಅವರು ನಗರದ ಡಾ ರವಿ ಪಾಟೀಲ್ ಆಸ್ಪತ್ರೆಗೆ ದಾಖಲಾಗಿ ಒಂದು ದಿನಕ್ಕೂ ಹೆಚ್ಚು ಸಮಯ ಕಳೆದಿದೆ ಮತ್ತು ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ಲಕ್ಷ್ಮಿಯವರ ಮಗ ಮೃಣಾಲ್ ಮತ್ತು ಸೊಸೆ ಡಾ ಹಿತಾ ಆಸ್ಪತ್ರೆಗೆ ಅಗಮಿಸಿದರು. ಅವರಿಬ್ಬರು ಕಾರಿಂದ ಇಳಿದು ಆಸ್ಪತ್ರೆ ಪ್ರವೇಶಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮನೆಯಿಂದಲೇ ಸಚಿವೆಗೆ ಉಪಹಾರ ತರಲಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗಾಯಗೊಂಡಿದ್ದು ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ಪತಿ ರವೀಂದ್ರ ಹೆಬ್ಬಾಳ್ಕರ್
Latest Videos