ಸರ್ವೋದಯ ಸಮಾವೇಶ ಮಲ್ಲಿಕಾರ್ಜುನ ಖರ್ಗೆಯವರನ್ನು ಸತ್ಕರಿಸಲು ಏರ್ಪಡಿಸಿದ್ದರೂ ಜನ ಸಿದ್ದರಾಮಯ್ಯಗೆ ದುಂಬಾಲು ಬಿದ್ದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2022 | 11:43 AM

ಸಮಾರಂಭ ಖರ್ಗೆ ಅವರಿಗಾಗಿ ಏರ್ಪಡಿಸಲಾಗಿದ್ದರೂ ಕಾರ್ಯಕರ್ತರು ಹಾಗೂ ಬೆಂಬಲಿಗರು ಸೆಲ್ಫೀಗಳಿಗಾಗಿ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಸಿದ್ದರಾಮಯ್ಯನವರಿಗೆ ಮುಗಿಬಿದ್ದಿದ್ದು ಆಶ್ಚರ್ಯ ಹುಟ್ಟಿಸುತ್ತದೆ.

ಬೆಂಗಳೂರು: ಇದು ರವಿವಾರದ ವಿಡಿಯೋ ಮಾರಾಯ್ರೇ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ರವಿವಾರದಂದು ನಗರದ ಅರಮನೆ ಮೈದಾನದಲ್ಲಿ ಸತ್ಕಾರ ಸಮಾರಂಭ (ಸರ್ವೋದಯ ಸಮಾವೇಶ) (Sarvodaya Convention) ಏರ್ಪಡಿಸಲಾಗಿತ್ತು. ಆದರೆ ಸಮಾರಂಭ ಖರ್ಗೆ ಅವರಿಗಾಗಿ ಏರ್ಪಡಿಸಲಾಗಿದ್ದರೂ ಕಾರ್ಯಕರ್ತರು ಹಾಗೂ ಬೆಂಬಲಿಗರು ಸೆಲ್ಫೀಗಳಿಗಾಗಿ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಸಿದ್ದರಾಮಯ್ಯನವರಿಗೆ ಮುಗಿಬಿದ್ದಿದ್ದು ಆಶ್ಚರ್ಯ ಹುಟ್ಟಿಸುತ್ತದೆ. ನೂಕುನುಗ್ಗಲಿನ ನಡುವೆ ಒಬ್ಬ ಬೋಕೆ ಹಿಡಿದುಬರುತ್ತಾನೆ, ಮತ್ತೊಬ್ಬ ದೂರದಿಂದಲೇ ಶಾಲು ಹೊದಿಸುತ್ತಾನೆ, ಮೂರನೇಯವ ಕಾಲುಮುಟ್ಟಿ ನಮಸ್ಕರಿಸುತ್ತಾನೆ.