ಬೆಳಗಾವಿ: ಗಾಂಧಿ ಭಾರತ ಪೂರ್ವಭಾವಿ ಸಭೆಯಲ್ಲಿ ಸುರ್ಜೆವಾಲಾ ಮತ್ತು ಸತೀಶ್ ಬೆಂಬಲಿಗರ ನಡುವೆ ವಾಗ್ವಾದ
ವಾಗ್ವಾದದ ನಡುವೆ ಸುರ್ಜೆವಾಲಾ ಅವರು ಕಾರ್ಯಕರ್ತರಿಗೆ ನೀವು ಸತೀಶ್ ಜಾರಕಿಹೊಳಿಯನ್ನು ಮೆಚ್ಚಿಸಲು ಹೀಗೆ ಹೇಳುತ್ತಿರುವಿರಿ ಎಂದಾಗ ಅವರು ಮತ್ತಷ್ಟು ವ್ಯಗ್ರರಾಗಿ ಜೋರು ಧ್ವನಿಯಲ್ಲಿ ಮಾತಾಡಲಾರಂಭಿಸುತ್ತಾರೆ. ವೇದಿಕೆ ಮೇಲೆ ಕೂತಿದ್ದ ಸತೀಶ್ ಜಾರಕಿಹೊಳಿ ಕೂಗಾಡುತ್ತಿದ್ದ ಕಾರ್ಯಕರ್ತರೆಡೆ ಕೈ ಮಾಡಿ ಸುಮ್ನಿರಿ ಗಲಾಟೆ ಮಾಡಬೇಡಿ ಅಂತ ಹೇಳಿದರೂ ಪ್ರಯೋಜನನವಾಗಲ್ಲ.
ಬೆಳಗಾವಿ: 1924 ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಅಚರಣೆ ಪೂರ್ವಭಾವಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಬಿಸಿ ತಾಕಿಸಿದರು. ಸುರ್ಜೆವಾಲಾ ಅವರು, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರು, ಗ್ಯಾರಂಟಿ ಸಮಿತಿ ಪದಾಧಿಕಾರಿಗಳೊಂದಿಗೆ ತಾನು ಮೀಟಿಂಗ್ ನಡೆಸಿಯಾಗಿದೆ ಎಂದು ಹೇಳಿದಾಗ ಕಾರ್ಯಕರ್ತರೊಬ್ಬರು ಎದ್ದುನಿಂತು ಏನೋ ಹೇಳುತ್ತಾರೆ. ಅದರಿಂದ ಅಸಮಾಧಾನಗೊಳ್ಳುವ ಸುರ್ಜೆವಾಲಾ, ನೀವೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಭೆ ನಡೆಸಿ ಅಂತ ಕಾರ್ಯಕರ್ತನಿಗೆ ಹೇಳುತ್ತಾರೆ. ಅವರ ಮಾತಿಗೆ ಅಸಮಾಧಾನ ಮತ್ತು ಕೋಪಗೊಳ್ಳುವ ಕಾರ್ಯಕರ್ತ ವಾಗ್ವಾದಕ್ಕಿಳಿದಾಗ ಅವರ ಪಕ್ಕದಲ್ಲಿದವರೂ ಧ್ವನಿ ಸೇರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂತ್ರಿಗಳ ಕಾರ್ಯವೈಖರಿ ಕುರಿತು ರಂದೀಪ್ ಸುರ್ಜೆವಾಲಾಗೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್