AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಬಸ್ ಬಳಿಕ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್

ಬಿಎಂಟಿಸಿ ಬಸ್ ಬಳಿಕ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್

Vinay Kashappanavar
| Edited By: |

Updated on: Feb 04, 2026 | 3:29 PM

Share

ಬಿಎಂಟಿಸಿ (BMTC) ಬಸ್​​ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಯುಪಿಐ ಸ್ಕ್ಯಾನರ್​​ಗಳನ್ನು ಹಾಕಿದೆ. ಆದ್ರೆ, ಕೆಲ ಕಂಡಕ್ಟರ್​​ಗಳು ಬಿಎಂಟಿಸಿ ಬಸ್​​​​ನಲ್ಲಿರುವ ಯುಪಿಐ ಸ್ಕ್ಯಾನರ್​​​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​​​ಗಳನ್ನು (UPI Scanner) ನೀಡಿ, ತಮ್ಮ ಬ್ಯಾಂಕ್ ಅಕೌಂಟ್​​ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಲ ಕಂಡಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸರದಿ. ಹೌದು...ಆಸ್ಪತ್ರೆಯ ಕೆಲ ಸಿಬ್ಬಂದಿ UPI ಮೂಲಕ 23 ಲಕ್ಷ ರೂಪಾಯಿ ದೋಚಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು, (ಫೆಬ್ರವರಿ 04): ಬಿಎಂಟಿಸಿ (BMTC) ಬಸ್​​ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಯುಪಿಐ ಸ್ಕ್ಯಾನರ್​​ಗಳನ್ನು ಹಾಕಿದೆ. ಆದ್ರೆ, ಕೆಲ ಕಂಡಕ್ಟರ್​​ಗಳು ಬಿಎಂಟಿಸಿ ಬಸ್​​​​ನಲ್ಲಿರುವ ಯುಪಿಐ ಸ್ಕ್ಯಾನರ್​​​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​​​ಗಳನ್ನು (UPI Scanner) ನೀಡಿ, ತಮ್ಮ ಬ್ಯಾಂಕ್ ಅಕೌಂಟ್​​ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಲ ಕಂಡಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (Bengaluru victoria hospital) ಸರದಿ. ಹೌದು…ಆಸ್ಪತ್ರೆಯ ಕೆಲ ಸಿಬ್ಬಂದಿ UPI ಮೂಲಕ 23 ಲಕ್ಷ ರೂಪಾಯಿ ದೋಚಿರುವುದು ಬೆಳಕಿಗೆ ಬಂದಿದೆ.

ರೋಗಿಗಳ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನ್​ಗೆ ಅವಕಾಶ ನೀಡಲಾಗಿತ್ತು. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಸ್ಪತ್ರೆ ಸಿಬ್ಬಂದಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿ ತಮ್ಮ ಖಾತೆಗೆ ರೋಗಿಗಳ ಹಣ ಹಾಕಿಸಿಕೊಂಡಿದ್ದಾರೆ. ಲ್ಯಾಬ್, OPD, ಎಕ್ಸ್​ರೇ ವಿಭಾಗದಲ್ಲಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿಕೊಂಡು 23 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ್ದಾರೆ. ಬಳಿಕ ಯುಪಿಐ ಸ್ಕ್ಯಾನರ್ ವಿಚಾರದಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ಅಧೀಕ್ಷಕ ದೀಪಕ್ ಅವರು ಸಮಿತಿ ರಚಿಸಿ ತನಿಖೆ ನಡೆಸಿದಾಗ ಸಿಬ್ಬಂದಿಯ ಕಳ್ಳಾಟ ಬಯಲಿಗೆ ಬಂದಿದ್ದು, ಎಲ್ಲಾ ದಾಖೆಗಳನ್ನು ಸಂಗ್ರಹಿಸಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್​ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ